ಮುಂಬೈ: ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸೇರಿದ ಮುಂಬೈಯಲ್ಲಿರುವ ಆಸ್ತಿ ಪಾಸ್ತಿಗಳನ್ನು ಇಂದು ಹರಾಜು ಹಾಕಲಾಗುತ್ತದೆ. ದಾವೂದ್ ನ ಮೂರು ಆಸ್ತಿಗಳನ್ನು ಇಂದು ಹರಾಜು ಹಾಕಲಾಗುತ್ತಿದೆ.
ಚರ್ಚ್ ಗೇಟ್ ಬಳಿ ಖಾಸಗಿ ಹರಾಜು ಸಂಸ್ಥೆಯೊಂದು ಈ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡಲಿದೆ. ಸಾರ್ವಜನಿಕವಾಗಿ ಮತ್ತು ಆನ್ ಲೈನ್ ಮೂಲಕವೂ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ದಾವೂದ್ ಗೆ ಸೇರಿದ್ದ ಒಂದು ರೆಸ್ಟೋರೆಂಟ್, ಬಹುಮಹಡಿ ಕಟ್ಟಡ ಹಾಗೂ ಒಂದು ಬಂಗಲೆ ಹರಾಜಾಗಲಿದೆ. ಬಂಗಲೆ ದಾವೂದ್ ನ ಮೊದಲ ಪತ್ನಿಯ ಹೆಸರಿನಲ್ಲಿ ಖರೀದಿಸಲಾಗಿತ್ತು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ