ಗಂಡ ಸೆಕ್ಸ್ ಗೆ ಬಲವಂತ ಮಾಡಿದರೆ ರೇಪ್ ಆಗೋದು ಹೇಗೆ?!
ನ್ಯಾಯಮೂರ್ತಿ ರಾಜೀವ್ ಶಕ್ದೆರ್ ಮತ್ತು ನ್ಯಾಯಮೂರ್ತಿ ಸಿ ಹರಿಶಂಕರ್ ವಿವಾಹನಂತರ ಅತ್ಯಾಚಾರವನ್ನು ಅಪರಾಧವೆಂದು ತೀರ್ಪು ನೀಡುವ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ಈ ಪ್ರಕರಣ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಅಪರಾಧವೆಂದು ಪರಿಗಣಿಸಬಾರದು ಎಂದು ಅಭಿಪ್ರಾಯ ಹೊಂದಿದ್ದ ನ್ಯಾಯಮೂರ್ತಿ ಸಿ ಹರಿಶಂಕರ್ ತಮ್ಮ ತೀರ್ಪಿನಲ್ಲಿ ಗಂಡ ಕೆಲವೊಮ್ಮೆ ಲೈಂಗಿಕ ಕ್ರಿಯೆ ನಡೆಸಲು ಹೆಂಡತಿಗೆ ಬಲವಂತ ಮಾಡಬಹುದು. ಆಕೆಗೆ ಮನಸ್ಸಿಲ್ಲದೇ ಹೋದರೂ ಆತ ಸೆಕ್ಸ್ ಮಾಡಿದರೆ ಆಕೆಗೆ ಯಾರೋ ಅಪರಿಚಿತರು ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆಂಬ ಮನೋಭಾವ ಬಾರದಲ್ಲವೇ? ಹಾಗಿದ್ದ ಮೇಲೆ ಇದನ್ನು ಅಪರಾಧವೆಂದು ಪರಿಗಣಿಸಲು ಸಾಧ‍್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಅವರ ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ.