ಘಟನೆ ವಿವರ: ಭಾನುವಾರ ಮಧ್ಯಾಹ್ನ ಈ ಕರಾಳ ಕೃತ್ಯ ನಡೆದಿದ್ದು, ರಾಹುಲ್ ಮತಾ (30) ಎಂಬಾತ ತನ್ನ ತಂದೆ ಆರ್ಥಿಕ ವಲಯದ ನಿವೃತ್ತ ನೌಕರ ಆರ್.ಪಿ. ಮತಾ ಅವರನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆಗೈದಿದ್ದಾನೆ. ತಾಯಿ ರೇಣು ಮತಾ ಪತಿಯನ್ನು ರಕ್ಷಿಸಲು ಬಂದಾಗ ಆಕೆಯ ಮೇಲೂ ಸಹ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿ ನಡೆಯುತ್ತಿರುವ ಗಲಾಟೆ ಕೇಳಿ ನೆರೆಹೊರೆಯವರು ಮತ್ತು ಹೌಸಿಂಗ್ ಸೊಸೈಟಿಯ ಭದ್ರತಾ ಸಿಬ್ಬಂದಿ ಸ್ಥಳಕ್ಕೋಡಿ ಬಂದಿದ್ದಾರೆ. ಅವರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಮಾತಾ ನಿವಾಸಕ್ಕೆ ಪೊಲೀಸರು ತಲುಪಿದ್ದಂತೆ ಆರೋಪಿ ಅಡುಗೆ ಕೋಣೆಯಲ್ಲಿ ಕದ ಹಾಕಿಕೊಂಡು ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ಹಚ್ಚಿ ಸ್ಪೋಟಿಸಿದ್ದಾನೆ. ಪರಿಣಾಮ ರಾಹುಲ್, ಒಬ್ಬ ನೆರೆಮನೆಯಾತ ಮತ್ತು 11 ಪೊಲೀಸರು ಗಾಯಗೊಂಡಿದ್ದಾರೆ.