ಫೋನ್ ಟ್ಯಾಪಿಂಗ್ ಬಗ್ಗೆ ಪ್ರಶ್ನಿಸಿದ ದೆಹಲಿ ಪೊಲೀಸ್; ಐಬಿಯನ್ನು ಕೇಳಿ ಎಂದ ಕೇಜ್ರಿವಾಲ್

ಶನಿವಾರ, 5 ನವೆಂಬರ್ 2016 (16:03 IST)
ನ್ಯಾಯಾಧೀಶರ ಪೋನ್ ಟ್ಯಾಪಿಂಗ್ ಕುರಿತಂತೆ ದೆಹಲಿ ಪೊಲೀಸರು ಕೇಳಿದ ಪ್ರಶ್ನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಐಬಿಯವರನ್ನು ಕೇಳಿ ಎಂದು ಉತ್ತರಿಸಿದ್ದಾರೆ. 

ಕಳೆದ ನಾಲ್ಕು ದಿನಗಳ ಹಿಂದೆ ನಡೆದ ದೆಹಲಿ ಹೈಕೋರ್ಟ್‌ನ 50ನೇ ವರ್ಷಾಚರಣೆ ನಿಮಿತ್ತ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನ್ನಾಡುತ್ತಿದ್ದ ಕೇಜ್ರಿವಾಲ್, ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರ ಫೋನ್ ಟ್ಯಾಪ್ ಮಾಡಲಾಗುತ್ತಿದೆ. ಸ್ವತಃ ಕೆಲ ನ್ಯಾಯಾಧೀಶರೇ ನನಗಿದನ್ನು ಹೇಳಿದ್ದಾರೆ ಎಂದು ಬಾಂಬ್ ಸಿಡಿಸಿದ್ದರು. 
 
ಇದು ಸತ್ಯವೋ ಸುಳ್ಳೋ ಎಂಬುದು ನನಗೆ ಗೊತ್ತಿಲ್ಲ. ಸತ್ಯವೆಂದಾಗರೆ ಇದು ಅಪಾಯಕಾರಿ ಎಂದು ಅವರು ಹೇಳಿದ್ದರು. 
 
ಈ ಕುರಿತಂತೆ ದೆಹಲಿ ಪೊಲೀಸ್ ಕಮಿಷನರ್ ಅಲೋಕ್ ವರ್ಮಾ, ಫೋನ್ ಟ್ಯಾಪ್‌ಗೊಳಗಾದ ನ್ಯಾಯಾಧೀಶರ ವಿವರಗಳನ್ನು ಕೊಂಡಿ ಎಂದು ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು. 
 
ನ್ಯಾಯಾಧೀಶರ ಫೋನ್‌ಗಳು ಟ್ಯಾಪ್ ಆಗಿವೆ ಎಂದು ನೀವು ಹೇಳಿದ್ದೀರಿ. ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಕೆಲವು ನ್ಯಾಯಾಧೀಶರ ಬಾಯಿಂದಲೇ ನೀವಿದನ್ನು ಕೇಳಿದ್ದೀರಿ. ನಿಮಗೆ ಗೊತ್ತಿರುವಂತೆ ಇದು ಅತ್ಯಂತ ಗಂಭೀರವಾದ ವಿಷಯ. ಹೀಗಾಗಿ ಈ ಕುರಿತು ವಿವರವನ್ನು ನೀಡುವಂತೆ ವರ್ಮಾ ಪತ್ರದಲ್ಲಿ ಕೇಳಿಕೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ