ವಿನಾಶಕಾರಿ ನೋಟು ನಿಷೇಧ: ಪ್ರಧಾನಿ ವಿಪಕ್ಷಗಳ ಕ್ಷಮೆ ಕೋರಲಿ

ಗುರುವಾರ, 31 ಆಗಸ್ಟ್ 2017 (15:52 IST)
ಭಾರತೀಯ ರಿಸರ್ವ್ ಬ್ಯಾಂಕ್‌ ಬಹುತೇಕ ಎಲ್ಲಾ ನೋಟುಗಳು ಬ್ಯಾಕಿಂಗ್‌ ವ್ಯವಸ್ಥೆಗೆ ವಾಪಸ್ ಬಂದಿವೆ ಎನ್ನುವ ಹೇಳಿಕೆಯ ಹಿನ್ನೆಯಲ್ಲಿ ನೋಟು ನಿಷೇಧ ಜಾರಿಗೆ ತಂದ ಪ್ರಧಾನಿ ಮೋದಿ ವಿಪಕ್ಷಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿವೆ.  
ಕಪ್ಪು ಹಣವನ್ನು ಶ್ವೇತಹಣವನ್ನಾಗಿ ಪರಿವರ್ತಿಸಲು ಕೇಂದ್ರ ಸರಕಾರ ನೋಟು ನಿಷೇಧ ಜಾರಿಗೊಳಿಸಿತು. ಆದರೆ, ಶೇ.99 ರಷ್ಟು ಹಣ ಮರಳಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಬಂದಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟೀಕಿಸಿದ್ದಾರೆ.  
 
ಪ್ರಧಾನಿ ಮೋದಿಯವರ ನಿರ್ಧಾರದಿಂದ ಆರ್‌ಬಿಐನ ಪವಿತ್ರತೆಗೆ ಧಕ್ಕೆಯಾಗಿದ್ದಲ್ಲದೇ ವಿದೇಶದಲ್ಲೂ ಭಾರತದ ಅವಿಶ್ವಾಸಾರ್ಹತೆಗೆ ಧಕ್ಕೆಯಾಯಿತು. ನೋಟು ನಿಷೇಧ ಪ್ರಧಾನಿ ಮೋದಿಯವರು ಮಾಡಿದ ಹಗರಣ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.  
 
ಸೆಂಟ್ರಲ್‌ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಥಶಾಸ್ತ್ರಜ್ಞರು ರೂ .500 ಮತ್ತು 1000 ರೂಪಾಯಿಗಳ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಲು ಸರಕಾರಕ್ಕೆ ಶಿಫಾರಸು ಮಾಡಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.
 
ಭ್ರಷ್ಟರು ನೋಟು ನಿಷೇಧದ ಲಾಭ ಪಡೆದಿದ್ದಲ್ಲದೇ 104 ಜನರ ಸಾವಿಗೆ ಕಾರಣವಾದ ಪ್ರಧಾನಿ ಮೋದಿಯವರ ನೋಟು ನಿಷೇಧ ವಿನಾಶಕಾರಿಯಲ್ಲದೇ ಮತ್ತೇನು ಅಲ್ಲ ಎಂದು ಮಾಜಿ ವಿತ್ತ ಖಾತೆ ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ