ಢೋಕ್ಲಾಂ ಗಡಿಯಲ್ಲಿ ಚೀನಾ ಸೇನೆ: ಭಾರತೀಯ ಸೇನೆಯ ಪ್ರತಿಕ್ರಿಯೆ ಏನು?
ಡೋಕ್ಲಾಂನಲ್ಲಿ ಚೀನಾ ಸೈನಿಕರು 80 ಮೀಟರ್ ಗಳಷ್ಟು ಮುಂದಕ್ಕೆ ಬಂದಿದ್ದಾರೆಂಬ ವರದಿಯಿದ್ದರೂ ಭಾರತೀಯ ಸೇನೆ ಏನೂ ಮಾಡುತ್ತಿಲ್ಲ ಎಂದು ಇತ್ತೀಚೆಗೆ ಅಮೆರಿಕಾ ಕೂಡಾ ಆಕ್ಷೇಪಿಸಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಭಾರತೀಯ ಸೇನೆ ಇದು ಸಾಮಾನ್ಯ ಗಸ್ತು ತಿರುಗುವಿಕೆಯಷ್ಟೇ ಎಂದಿದೆ. ಇಲ್ಲಿ ಚೀನಾ ಗಡಿ ಭದ್ರತಾ ಪಡೆ ತನ್ನ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡಿದೆ ಎಂಬ ವರದಿಗಳನ್ನು ಭಾರತೀಯ ಸೇನಾ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ.