ರಾಮನಿಗೆ ಅಗೌರವ ತೋರುವುದು ವಾಲ್ಮೀಕಿಯನ್ನು ಅವಮಾನಿಸಿದ ಹಾಗೇ: ಯೋಗಿ

Sampriya

ಮಂಗಳವಾರ, 7 ಅಕ್ಟೋಬರ್ 2025 (17:29 IST)
ಲಕ್ನೋ (ಉತ್ತರ ಪ್ರದೇಶ): ರಾಮನಿಗೆ ಅಗೌರವ ತೋರುವುದು ಭಗವಾನ್ ವಾಲ್ಮೀಕಿಯನ್ನು ಅವಮಾನಿಸುವುದಕ್ಕೆ ಸಮಾನವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಹೇಳಿದ್ದಾರೆ. 

ಸಿಎಂ ಯೋಗಿ ಲಕ್ನೋದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ವಾಲ್ಮೀಕಿ ಜಯಂತಿಯನ್ನು ವೈಭವದಿಂದ ಆಚರಿಸುತ್ತಿದ್ದು, ರಾಮಾಯಣ ಪಠಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತಿಗೀತೆಗಳು, ಸ್ತೋತ್ರಗಳು ಮತ್ತು ದೀಪ ಬೆಳಗಿಸುವ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಎಲ್ಲಾ ವಾಲ್ಮೀಕಿ ಸಂಬಂಧಿತ ದೇವಾಲಯಗಳು ಮತ್ತು ಕ್ಷೇತ್ರಗಳಲ್ಲಿ ನಡೆಸಲಾಗುವುದು. 

ಪ್ರತಿ ವರ್ಷದಂತೆ ಸ್ಥಳೀಯ ಕಲಾವಿದರಿಗೆ ಅಧ್ಯಾತ್ಮಿಕ ವೇದಿಕೆ ಕಲ್ಪಿಸಲಾಗಿದ್ದು, ಸಮುದಾಯದ ಸಹಭಾಗಿತ್ವದಲ್ಲಿ ಸಾರ್ವಜನಿಕರ ಉಪಸ್ಥಿತಿ ಮತ್ತು ಗಮನವನ್ನು ಕೇಂದ್ರೀಕರಿಸುವಂತೆ ಸಂಸ್ಕೃತಿ ಇಲಾಖೆಗೆ ಸಿಎಂ ಸೂಚನೆ ನೀಡಿದರು. 

ವಾಲ್ಮೀಕಿ ಜಯಂತಿ ಹಿಂದೂ ಮಹಾಕಾವ್ಯ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನದಂದು ಆಚರಿಸಲಾಗುವ ಹಿಂದೂ ಹಬ್ಬವಾಗಿದೆ. ಸಾಹಿತ್ಯ ಮತ್ತು ಆಧ್ಯಾತ್ಮಿಕತೆಗೆ ಅವರು ನೀಡಿದ ಕೊಡುಗೆಗಳು ಅವರನ್ನು ಪ್ರೀತಿಯ ವ್ಯಕ್ತಿಯಾಗಿ ಮಾಡಿದೆ. 

ಅವರನ್ನು ಸಂಸ್ಕೃತ ಭಾಷೆಯ ಮೊದಲ ಕವಿ ಆದಿ ಕವಿ ಎಂದು ಪೂಜಿಸಲಾಗುತ್ತದೆ.ಹಿಂದೂ ಕ್ಯಾಲೆಂಡರ್ ಪ್ರಕಾರ, ವಾಲ್ಮೀಕಿ ಜಯಂತಿಯು ಅಶ್ವಿನ್ ತಿಂಗಳ ಹುಣ್ಣಿಮೆಯ ದಿನದಂದು ಬರುತ್ತದೆ, ಇದು ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ಗೆ ಅನುರೂಪವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ