ಶರಿಯತ್ ಕೋರ್ಟ್‌ಗಳನ್ನು ನಿವಾರಿಸಿ: ಸುಪ್ರೀಂಕೋರ್ಟ್‌ಗೆ ಮುಸ್ಲಿಂ ವಕೀಲೆ ಮನವಿ

ಬುಧವಾರ, 7 ಸೆಪ್ಟಂಬರ್ 2016 (19:53 IST)
ನ್ಯಾಯಾಂಗ ಕುರಿತು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುವ ಶರಿಯತ್ ಕೋರ್ಟ್‌ಗಳನ್ನು ನಿವಾರಿಸುವಂತೆ ಮುಸ್ಲಿಂ ಮಹಿಳಾ ನ್ಯಾಯವಾದಿ ಮಂಗಳವಾರ ಸುಪ್ರೀಂಕೋರ್ಟ್‌ಗೆ ಒತ್ತಾಯಿಸಿದ್ದಾರೆ.

ದೇಶದಲ್ಲಿ ಸುಪ್ರೀಂಕೋರ್ಟ್, ಹೈಕೋರ್ಟ್, ಜಿಲ್ಲಾ ಕೋರ್ಟ್ ಮತ್ತು ಕೌಟುಂಬಿಕ ಕೋರ್ಟ್‌ಗಳು ಫೆಡರಲ್ ಶರಿಯತ್ ಕೋರ್ಟ್‌ಗಳ ಜತೆಗಿವೆ. ಒಕ್ಕೂಟ ಶರಿಯತ್ ಕೋರ್ಟ್ ಜತೆ ಅಭಿವೃದ್ಧಿಯಾದ ನ್ಯಾಯಾಂಗ ವ್ಯವಸ್ಥೆ ಅಸ್ತಿತ್ವದಲ್ಲಿರುವಾಗ, ಈ ಮೂಲಭೂತವಾದಿಗಳಿಗೆ ತೃಪ್ತಿಯಾಗದೇ ದರ್ ಉಲ್ ಖಾಜಾ ರೀತಿಯಲ್ಲಿ ಅವರದ್ದೇ ಶರಿಯತ್ ಕೋರ್ಟ್‌ಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಫರಾ ಫೈಜ್ ಆರೋಪಿಸಿದರು. 
 
ಎಐಎಂಪಿಎಲ್‌ಬಿ, ಭಾರತೀಯ ಮುಸ್ಲಿಂ ಮಹಿಳಾ ಆಂದೋಳನ ಮತ್ತು ಪಾಕ್‌ನ ಹಫೀಜ್ ಮಹಮ್ಮದ್ ಸಯೀದ್ ಜಮತ್ ಉದ್ ದವಾ ನಡುವೆ ಯಾವುದೇ ವ್ಯತ್ಯಾಸವಿಲ್ಲ.  ಹಫೀಜ್ ಕೂಡ ನ್ಯಾಯ ತೀರ್ಮಾನದ ಹೆಸರಿನಲ್ಲಿ, ಶೀಘ್ರ ಮತ್ತು ಅಗ್ಗದ ನ್ಯಾಯದ ಶರಿಯತ್ ಕೋರ್ಟ್ ನಡೆಸುತ್ತಿದ್ದಾನೆ ಎಂದು ನ್ಯಾಯವಾದಿ ಹೇಳಿದರು.
 
ಮುಸ್ಲಿಂ ಮಹಿಳೆಯರು ಈಗಲೂ ಅಸುರಕ್ಷಿತರಾಗದಿದ್ದು, ಮಹಿಳೆಯರಿಗೆ ತಾರತಮ್ಯ ಈ ಕಾನೂನುಗಳಿಂದ ನಿವಾರಣೆಯಾಗಿಲ್ಲ. ಟ್ರಿಪಲ್ ತಲಾಕ್ ಇಸ್ಲಾಮಿಕ್ ತತ್ವಕ್ಕೆ ವಿರುದ್ಧವಾಗಿದ್ದು, ಎಐಎಂಪಿಎಲ್‌ಬಿ ಅದನ್ನು ಸಮರ್ಥಿಸಿಕೊಂಡಿದೆ ಎಂದು ಅವರು ಪ್ರತಿಪಾದಿಸಿದರು. 
 

ವೆಬ್ದುನಿಯಾವನ್ನು ಓದಿ