ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದವರಿಗೆ ಪಾಲಿಕೆಯ ಅಧಿಕಾರಿ ನೀಡಿದ ಶಿಕ್ಷೆ ಏನು ಗೊತ್ತಾ?

ಶನಿವಾರ, 2 ನವೆಂಬರ್ 2019 (09:11 IST)
ಭೋಪಾಲ್ : ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ತಪ್ಪಿಗೆ ಇಬ್ಬರು ವ್ಯಕ್ತಿಗಳಿಗೆ ಮಹಾನಗರ ಪಾಲಿಕೆಯ ಅಧಿಕಾರಿ ಬಸ್ಕಿ ಹೊಡಿಸಿದ ಘಟನೆ ಮಧ್ಯಪ್ರದೇಶದ ಮಾರಿಮಾತಾ ಪ್ರದೇಶದಲ್ಲಿ ನಡೆದಿದೆ.




ಮಾರಿಮಾತಾ ಪ್ರದೇಶದಲ್ಲಿ ಆಟೋ ಚಾಲಕ ಹಾಗೂ ಪ್ರಯಾಣಿಕ ಇಬ್ಬರು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ಕಂಡ ಇಂದೋರ್ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಇಬ್ಬರಿಗೂ ತಲಾ 250 ರೂ ದಂಡ ಕಟ್ಟುವಂತೆ ಹೇಳಿದ್ದಾರೆ. ಆದರೆ ಇಬ್ಬರ ಬಳಿ ಹಣವಿಲ್ಲದ ಕಾರಣ ಅವರ ಬಳಿ ಬಸ್ಕಿ ಹೊಡೆಯುವಂತೆ ಶಿಕ್ಷೆ ವಿಧಿಸಿದ್ದಾರೆ.


ಅಧಿಕಾರಿಯ ಮುಂದೆ ಇಬ್ಬರು ಬಸ್ಕಿ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ ಇದು ತಕ್ಕ ಶಿಕ್ಷೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ