ಆರೋಪಿ ಬಹುದಿನಗಳಿಂದ ನನ್ನ ಪುತ್ರಿಗೆ ಕಿರುಕುಳ ನೀಡುತ್ತಿದ್ದನು. ಆರೋಪಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಅತನನ್ನು ಬಂಧಿಸಲಾಗಿತ್ತು. ಪೊಲೀಸರ ಹೊಡೆತ ತಿಂದ ನಂತರ ಪುತ್ರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದನು. ಇದೀಗ ನಿನ್ನೆ ಮಾರುಕಟ್ಟೆಗೆ ತೆರಳಿದ ಪುತ್ರಿಯ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ ಎಂದು ಯುವತಿಯ ತಾಯಿ ಅರಣ್ಯರೋಧನ ಗೈದಿದ್ದಾರೆ.
ಯುವತಿಗೆ ಶೇ.50 ರಷ್ಟು ಗಾಯಗಳಾಗಿದ್ದು, ಆಕೆಯ ಗೆಳತಿಗೆ ಶೇ.20 ರಷ್ಟು ಗಾಯಗಳಾಗಿವೆ. ಇಬ್ಬರನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಇದೀಗ ಲೋಕ್ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.