ಹೌದು. ಬನಸ್ಕಂತ ಜಿಲ್ಲೆಯ ಅಮೀರ್ ಗಢ ತಾಲೂಕಿನ ಬುಡಕಟ್ಟು ಗ್ರಾಮ ಖತಿಸಿತರಾದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಕಂಠಪೂರ್ತಿ ಕುಡಿದು ತಮ್ಮ ಹೆಂಡತಿ, ಮಕ್ಕಳಿಗೆ ಹೊಡೆಯುತ್ತಿದ್ದರು. ಇದನ್ನು ತಪ್ಪಿಸಲು ಗ್ರಾಮದ ಹಿರಿಯರು ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.
ಅದೇನೆಂದರೆ ಈ ಗ್ರಾಮದಲ್ಲಿ ಯಾರಾದರೂ ಮದ್ಯಸೇವನೆ ಮಾಡಿ ಸಿಕ್ಕಿಬಿದ್ದರೆ ಇಡೀ ಊರಿಗೆ ಮಟನ್ ಊಟ ಹಾಕಿಸಬೇಕು. ಹಿರಿಯರ ಈ ನಿಯಮ ಯಶಸ್ವಿಯಾಗಿದ್ದು, ಈಗ ಈ ಗ್ರಾಮದಲ್ಲಿ ಕುಡುಕರ ಹಾವಳಿ ಕಡಿಮೆಯಾಗಿದೆ ಎನ್ನಲಾಗಿದೆ.