ಗುರುದೇವ್ ಎಂಬ ರೈತ ತನ್ನ ಮನೆಯ ಹೊರಗೆ ಮಲಗಿದ್ದ. ಆತನ ನಾಲ್ಕು ವರ್ಷದ ನಾಯಿ ಜಾಕಿ ಕೂಡ ಅಲ್ಲೇ ಪಕ್ಕದಲ್ಲಿ ಮಲಗಿತ್ತು. ಅಲ್ಲೇ ಸಮೀಪದಲ್ಲಿದ್ದ ಅರಣ್ಯದಿಂದ ಹುಲಿ ತಮ್ಮತ್ತ ಬರುತ್ತಿರುವುದನ್ನು ವಾಸನೆಯಿಂದ ಗ್ರಹಿಸಿದ ನಾಯಿ ಜಾಕಿ ತನ್ನ ಮಾಲೀಕನನ್ನು ಎಬ್ಬಿಸಿತು. ಅದನ್ನು ಎದುರಿಸಲು ಗುರುದೇವ್ ಡೊಣ್ಣೆ ಹುಡುಕುತ್ತಿದ್ದಾಗ ಹುಲಿ ಆತನ ಮೇಲೆ ದಾಳಿ ನಡೆಸಲು ಪ್ರಯತ್ನಿಸಿತು. ಆದರೆ ಅದಕ್ಕೆ ಆಸ್ಪದ ಕೊಡದ ನಾಯಿ ತನ್ನ ಜೀವ ನಿಲ್ಲದು ಎಂದು ಗೊತ್ತಿದ್ದರೂ ತನಗಿಂತ ಶಕ್ತಿಶಾಲಿಯಾದ ಹುಲಿಯ ವಿರುದ್ಧ ಸಮರಕ್ಕಿಳಿಯಿತು. ನಾಯಿಯನ್ನು ಗಂಭೀರವಾಗಿ ಗಾಯಗೊಳಿಸಿದ ಹುಲಿ ಅದನ್ನು ಅಲ್ಲಿಂದ ಎಳೆದೊಯ್ದಿತು.