ಪ್ರಜ್ವಲ್ ಹೇಳಿಕೆ ಬಗ್ಗೆ ಎಚ್.ಡಿ. ರೇವಣ್ಣ ಪ್ರತಿಕ್ರಿಯೆ ಹೀಗಿತ್ತು

ಶುಕ್ರವಾರ, 7 ಜುಲೈ 2017 (11:16 IST)
ಜೆಡಿಎಸ್ ಪಕ್ಷದ ವಿರುದ್ಧವೇ ಗುಡುಗುವ ಮೂಲಕ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಹಿಂದಿನ ಸೀಟ್`ನಲ್ಲಿ ಕೂರಿಸಿತ್ತಾರೆ, ಸೂಟ್ ಕೇಸ್ ತಂದವರಿಗೆ ಮೊದಲ ಬೆಂಚ್`ನಲ್ಲಿ ಕೂರಿಸುತ್ತಾರೆ ಎಂದು ಹುಣಸೂರಿನಲ್ಲಿ ಹೇಳಿಕೆ ನೀಡಿದ್ದರು. ಪುತ್ರನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಚ್.ಡಿ.  ರೇವಣ್ಣ, ಪ್ರಜ್ವಲ್ ಹೇಳಿಕೆಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಆಷಾಢ ಶುಕ್ರವಾರ ಪ್ರಯುಕ್ತ ಪತ್ನಿ ಸಮೇತರಾಗಿ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಎಚ್. ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ , ಅವರು ಹಿರಿಯ ನಾಯಕರಾಗಿದ್ದು ಅಪಾರ ಅನುಭವವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇವೇಳೆ, ಜೆಡಿಎಸ್`ನಲ್ಲಿ ದೇವೇಗೌಡರು, ಕುಮಾರಸ್ವಾಮಿ ಹೇಳಿದ ಮಾತೇ ಅಂತಿಮ. ಅವರ ಮಾತನ್ನ ಯಾರನ್ನೂ ಮೀರುವುದಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂ ದು ರೇವಣ್ಣ ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ