ನನಗೆ ಕತ್ತೆಯೇ ಸ್ಪೂರ್ತಿ: ಅಖಿಲೇಶ್ ಯಾದವ್ ಗೆ ಪ್ರಧಾನಿ ಮೋದಿ ತಿರುಗೇಟು

ಶುಕ್ರವಾರ, 24 ಫೆಬ್ರವರಿ 2017 (09:27 IST)
ನವದೆಹಲಿ:  ಗುಜರಾತ್ ನ ಕತ್ತೆಗಳು ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಕತ್ತೆಗೆ ಹೋಲಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ಮೋದಿ ಸರಿಯಾಗಿ ತಿರುಗೇಟು ನೀಡಿದ್ದಾರೆ.

 
ಕೆಲಸ ಮಾಡಲು ನನಗೆ ಕತ್ತೆಯೇ ಸ್ಪೂರ್ತಿ ಎಂದಿದ್ದಾರೆ. “ಕೆಲವರಿಗೆ ಕತ್ತೆಯೆಂದರೆ ಇಷ್ಟವಿಲ್ಲ. ಆದರೆ ನಮ್ಮ ಗುಜರಾತ್ ನಲ್ಲಿ ಕತ್ತೆಗಳನ್ನೂ ಸಿಂಹದಂತೇ ಸಂರಕ್ಷಿಸುತ್ತೇವೆ. ಕತ್ತೆ ನಮಗೆ ಆದರ್ಶ ಪ್ರಾಣಿ. ಅದು ತನ್ನ ಯಜಮಾನನ ಮಾತನ್ನು ಪಾಲಿಸುತ್ತದೆ. ಬಿಸಿಲು, ಮಳೆ, ಚಳಿಯೆನ್ನದೆ ಕಠಿಣ ಪರಿಶ್ರಮ ಪಡುತ್ತದೆ. ನನಗೆ ಕಠಿಣ ಪರಿಶ್ರಮ ಪಡಲು ಕತ್ತೆಯೇ ಸ್ಪೂರ್ತಿ” ಎಂದು ಮೋದಿ ಚುನಾವಣಾ ಭಾಷಣದಲ್ಲಿ ತಿರುಗೇಟು ನೀಡಿದ್ದಾರೆ.

ಇಷ್ಟೇ ಅಲ್ಲದೆ ಮೋದಿ ಕತ್ತೆಯ ಪ್ರಾಮಾಣಿಕತೆ ಬಗ್ಗೆ ಸ್ಥಳೀಯ ಬರಹಗಾರರೊಬ್ಬರು ಬರೆದ ಕವಿತೆಯನ್ನೂ ಓದಿದರು. ಗುಜರಾತ್ ಪ್ರವಾಸೋದ್ಯಮ ಪ್ರಚಾರ ಮಾಡುವ ಅಮಿತಾಬ್ ಬಚ್ಚನ್ ರನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್ ಗುಜರಾತ್ ನ ಕತ್ತೆಗಳನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದರು. ಇದಕ್ಕೆ ಮೋದಿ ಸರಿಯಾಗಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ