ಎದೆ ನೋವಿನ ಜತೆಗೆ ಜ್ವರ: ಅಸಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಏನಾಗಿದೆ?!
ಸೋಮವಾರ, 11 ಮೇ 2020 (09:44 IST)
ನವದೆಹಲಿ: ಎದೆ ನೋವಿನ ಕಾರಣದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಎದೆ ನೋವಿನ ಜತೆಗೆ ಇದೀಗ ಜ್ವರವೂ ಕಾಣಿಸಿಕೊಂಡಿದೆ.
ನಿನ್ನೆ ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮನಮೋಹನ್ ಸಿಂಗ್ ಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎದೆ ನೋವಿಗೆ ಔಷಧ ನೀಡಿದ ಬಳಿಕ ಇದೀಗ ಮಾಜಿ ಪ್ರಧಾನಿಗೆ ಸಣ್ಣ ಪ್ರಮಾಣದಲ್ಲಿ ಜ್ವರವೂ ಕಾಣಿಸಿಕೊಂಡಿದೆ.
ಹೀಗಾಗಿ ಮನಮೋಹನ್ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಜ್ವರದ ಹಿಂದಿನ ಕಾರಣ ತಿಳಿಯಲು ವೈದ್ಯರು ಶ್ರಮಿಸುತ್ತಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಸ‍್ಥಿರವಾಗಿದೆ ಎಂದು ಏಮ್ಸ್ ಮೂಲಗಳು ಹೇಳಿವೆ.