ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡ ಎಂದಿದ್ದಕ್ಕೆ ಚಾಲಕನ ಕೊಲೆ!
ದೆಹಲಿ ಮೆಟ್ರೋ ನಿಲ್ದಾಣದ ಬಳಿ ಅನತಿ ದೂರದಲ್ಲೇ ಸುಲಭ್ ಶೌಚಾಲಯವಿದ್ದರೂ, ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಲು ಹೊರಟ ಆರೋಪಿಗಳನ್ನು ರವೀಂದ್ರ ಕುಮಾರ್ ತಡೆದಿದ್ದರು. ಇದರಿಂದ ಕೋಪಗೊಂಡ ಆರೋಪಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.