''ನೀವು ಮುಳುಗಿರಿ ಅಥವಾ ಸಾಯಿರಿ, ಅದು ನಮಗೆ ಸಂಬಂಧಿಸಿಲ್ಲ, ಆದರೆ ನೀವು ಸ್ಥಿರಾಸ್ತಿ ಖರೀದಿದಾರರಿಗೆ ಹಣ ಹಿಂತಿರುಗಿಸಲೇ ಬೇಕು. ನಮಗೆ ನಿಮ್ಮ ಆರ್ಥಿಕ ಸ್ಥಿತಿಗತಿಯ ಬಗ್ಗೆ ಎಳ್ಳಷ್ಟೂ ಚಿಂತೆಯಿಲ್ಲ ''
ಸುಪ್ರೀಂಕೋರ್ಟ್ ಸೂಪರ್‌ಟೆಕ್ ಎಂಬ ಕಂಪನಿಗೆ 17 ಗೃಹ ಖರೀದಿ ಗ್ರಾಹಕರ ಮೊತ್ತದಲ್ಲಿ ಮಾಸಿಕ ಶೇ. 10ರಷ್ಟನ್ನು ನಾಲ್ಕು ವಾರಗಳಲ್ಲಿ ವಾಪಸ್ ನೀಡುವಂತೆ ನಿರ್ದೇಶಿಸಿದೆ. ಸೂಪರ್‍ಟೆಕ್ ಮುಂದಿನ ವಿಚಾರಣೆ ದಿನಾಂಕದಂದು 17 ಗ್ರಾಹಕರಿಗೆ ಪಾವತಿ ಮಾಡಿದ ರೂಪುರೇಷೆಯನ್ನು ಹಾಜರುಪಡಿಸುವಂತೆ ಸೂಚಿಸಿತು. ಸೂಪರ್‌ಟೆಕ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ಧವನ್, ಸುಪ್ರೀಂಕೋರ್ಟ್ ಬ್ಯಾಂಕರ್ ರೀತಿ ವರ್ತಿಸಬಾರದು, ಸಮಾನತೆಯ ತತ್ವವನ್ನು ಅನುಸರಿಸಬೇಕು ಎಂದು ಹೇಳಿದರು.