ಕೋಕಾ ಕೋಲಾ ಖರೀದಿಸುತ್ತೇನೆಂದ ಎಲಾನ್ ಮಸ್ಕ್
ಈ ಕುರಿತು ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಕೊಕೇನ್ ಅನ್ನು ಮತ್ತೆ ಹಾಕುವುದಕ್ಕಾಗಿ ಕೋಕಾ ಕೋಲಾವನ್ನು ಖರೀದಿಸುತ್ತೇನೆ ಎಂದು ತಿಳಿಸಿದ್ದಾರೆ.
ಆದರೆ ಎಲಾನ್ ಮಸ್ಕ್ ಅವರ ಈ ಹೇಳಿಕೆಯನ್ನು ನೆಟ್ಟಿಗರು ತಮಾಷೆಯಾಗಿ ಪರಿಗಣಿಸಿದ್ದಾರೆ. ಕೋಕಾ ಕೋಲಾ ಖರೀದಿ ಸಂಬಂಧ ಮಸ್ಕ್ ಮಾಡಿರುವ ಟ್ವೀಟ್ಗೆ ಹಲವರು ತಮಾಷೆಯಾಗಿ ಕಾಮೆಂಟ್ಗಳನ್ನು ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ 3.36 ಲಕ್ಷ ಕೋಟಿ ರೂ.ಗೆ ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಖರೀದಿಸಿದ್ದಾರೆ. ಇದರ ಬೆನ್ನಲ್ಲೇ ಕೋಕಾ ಕೋಲಾ ಖರೀದಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದು 1894 ರಲ್ಲಿ 3.5 ಗ್ರಾಂ ಕೊಕೇನ್ ಅನ್ನು ಒಳಗೊಂಡಿರುವ ಕೋಕಾ-ಕೋಲಾದ ಸಾರ್ವಜನಿಕವಾಗಿ ಮಾರಾಟವಾದ ಮೊದಲ ಬಾಟಲಿಯಾಗಿದೆ.