ಎಲೆಕ್ಟ್ರಿಕ್‌ ಸ್ಕೂಟರ್ ಸ್ಪೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಶನಿವಾರ, 23 ಏಪ್ರಿಲ್ 2022 (15:14 IST)
ದೇಶದಲ್ಲಿ ದಿನದಿಂದ ದಿನಕ್ಕೆ ಎಲೆಟ್ರಾನಿಕ್ ಸ್ಕೂಟರ್ ಸ್ಪೋಟ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಆಂಧ್ರ ಪ್ರದೇಶದ ವಿಜವಾಡದಲ್ಲಿ ಮತ್ತೊಂದು ಸ್ಕೂಟರ್ ಸ್ಪೋಟಗೊಂಡಿದೆ.
ಬ್ಯಾಟರಿಯನ್ನು ಮಲಗುವ ಕೋಣೆಯಲ್ಲಿ ಚಾರ್ಜಿಂಗ್ ಹಾಕಿ ಮಲಗಿದ್ದ ವೇಳೆ ಬ್ಯಾಟರಿ ಸ್ಪೋಟಗೊಂಡಿದ್ದು ಸ್ಪೋಟದ ರಭಸಕ್ಕೆ ವ್ಯಕ್ತಿ ಸ್ಥಳದಲ್ಲೇ ಸಾವನಪ್ಪಿದ್ದು ಇನ್ನುಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಮೃತ ದುರ್ದೈವಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸ್ಪೋಟದ ರಭಸಕ್ಕೆ ಕೂಡಲೇ ಧಾವಿಸಿದ ನೆರೆಹೊರೆಯವರು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಕೆಲಸವನ್ನ ಮಾಡಿದ್ದಾರೆ. ಶುಕ್ರವಾರವಷ್ಟೇ ಹೊಸ ಇ-ಸ್ಕೂಟರ್ ಅನ್ನು ಖರೀದಿಸಿದ್ದರು ಎಂದು ತಿಳಿದು ಬಂದಿದೆ. ಗಾಡಿ ಹಾಗೂ ಇತರೆ ಮಾಹಿತಿ ಬಗ್ಗೆ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.
ಇದು ಆಂಧ್ರ ಹಾಗೂ ತೆಲಂಗಾಣದಲ್ಲಿ ಪ್ರದೇಶದಲ್ಲಿ ವರದಿಯಾಗಿರುವ ಎರಡನೇ ಪ್ರಕರಣವಾಗಿದೆ. ತೆಲಂಗಾಣದ ನಿಜಾಮಾಬಾದ್ನಲ್ಲಿ 80 ವರ್ಷದ ವ್ಯಕ್ತಿ ಬ್ಯಾಟರಿಯನ್ನು ಚಾರ್ಜ್ ಹಾಕಿದ ವೇಳೆ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದರು.
ದೇಶದಲ್ಲಿ ಎಲೆಟ್ರಾನಿಕ್ ಸ್ಕೂಟರ್ಗಳ ಸರಣಿ ಸ್ಪೋಟ ಸಂಭವಿಸುತ್ತಿದ್ದು ಬ್ಯಾಟರಿಗಳ ಬಗ್ಗೆ ಜನರಲ್ಲಿ ಹೆಚ್ಚು ಕಳವಳವನ್ನು ಉಂಟು  ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಇ-ಸ್ಕೂಟರ್ಗಳ ಸ್ಪೋಟ ಹಾಗೂ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ಪ್ರಕರಣಗಳು ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ