ಪ್ರತಿಯೊಬ್ಬರಿಗೂ ಗೋಮಾಂಸ ತಿನ್ನುವ ಹಕ್ಕಿದೆ: ಮೋದಿ ಸಂಪುಟದ ಸಚಿವ

ಶನಿವಾರ, 15 ಜುಲೈ 2017 (15:19 IST)
ಗೋಮಾಂಸ ಮತ್ತು ಗೋ-ರಕ್ಷಕರ ಕುರಿತಾದ ವಿವಾದಗಳ ಮಧ್ಯೆ, ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಮದಾಸ್ ಅಠಾವಾಲೆ ರಾಜ್ಯ ಸಚಿವ, ಪ್ರತಿಯೊಬ್ಬರಿಗೂ ಗೋಮಾಂಸ ತಿನ್ನಲು ಹಕ್ಕಿದೆ. ಯಾರೂ ತಮ್ಮ ಕೈಯಲ್ಲಿ ಕಾನೂನನ್ನು ತೆಗೆದುಕೊಳ್ಳಬಾರದು ಎಂದು ಹೇಳಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
 
ಗೋ-ರಕ್ಷಕರಿಂದ ಉಂಟಾದ ಹಿಂಸಾಚಾರದ ಘಟನೆಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
 
ದೇಶದ ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದನ್ನು ಯಾರೂ ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
 
ದೇಶದಲ್ಲಿರುವ ಪ್ರತಿಯೊಬ್ಬರಿಗೂ ಗೋಮಾಂಸ ತಿನ್ನಲು ಹಕ್ಕಿದೆ. ಗೋ-ರಕ್ಷಕರಿಗೆ ಪೋಲೀಸ್ ದೂರನ್ನು ದಾಖಲಿಸುವ ಹಕ್ಕಿದೆ ಆದಾಗ್ಯೂ, ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಹಲ್ಲೆ, ಹತ್ಯೆ ಮಾಡುವ ಯಾವುದೇ ಅಧಿಕಾರವಿಲ್ಲ. ಇವರು ಕಾನೂನಿಗಿಂತ ಮೇಲಲ್ಲ ಎಂದು ಕೇಂದ್ರದ ರಾಜ್ಯ ಸಚಿವ ರಾಮದಾಸ್ ಅಠವಾಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ