ರಾಜ್ಯಸಭಾ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ನವಜೋತ ಸಿದ್ದು ರಾಜೀನಾಮೆ
ಸೋಮವಾರ, 18 ಜುಲೈ 2016 (15:27 IST)
ಬಿಜೆಪಿ ಹೈಕಮಾಂಡ್‌ನ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿದ್ದು ತಮ್ಮ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹಿಂದೆ ಪಂಜಾಬ್‌ನ ಅಮೃತ್‌ಸರ್ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಸಿದ್ದು, ಹಿರಿಯರ ಒತ್ತಡಕ್ಕೆ ಮಣಿದು ಲೋಕಸಭಾ ಸ್ಥಾನವನ್ನು ಅರುಣ್ ಜೇಟ್ಲಿಗೆ ಬಿಟ್ಟುಕೊಟ್ಟಿದ್ದರು. ಆದರೆ, ಚುನಾವಣೆಯಲ್ಲಿ ಜೇಟ್ಲಿ ಸೋಲನುಭವಿಸಿದ್ದರು.
ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ-ಸಾದ್ ಮೈತ್ರಿಕೂಟದ ಸರಕಾರ ಡ್ರಗ್ಸ್ ಸೇರಿದಂತೆ ಅನೇಕ ವ್ಯವಹಾರಗಳಲ್ಲಿ ಭಾಗಿಯಾಗಿದ್ದು, ಜನತೆಯ ಮುಂದೆ ತಲೆ ಎತ್ತಿನಿಲ್ಲದಂತಾಗಿದೆ ಎಂದು ಸಿದ್ದು ಆಕ್ರೋಶವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ನವಜೋತ್ ಸಿಂಗ್ ಸಿದ್ದು ರಾಜೀನಾಮೆ ನೀಡಿರುವುದು ಹಲವಾರು ಉಹಾಪೋಹಗಳಿಗೆ ಕಾರಣವಾಗಿವೆ. ಆಮ್ ಆದ್ಮಿ ಪಕ್ಷ ಮುಂದೆ ಅಧಿಕಾರಕ್ಕೆ ಬರಲಿದೆ ಎನ್ನುವ ಸಮೀಕ್ಷೆಗಳಿಂದಾಗಿ ಸಿದ್ದು ಆಪ್ ಪಕ್ಷವನ್ನು ಸೇರಲಿದ್ದಾರೆಯೇ ಎನ್ನುವ ಅನುಮಾನಗಳು ಕಾಡುತ್ತಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.