ಕ್ಷುಲ್ಲುಕ ಕಾರಣಕ್ಕೆ ಸೊಸೆಯನ್ನು ಕೊಂದ ಮಾವ
ಕೌಟುಂಬಿಕ ಕಲಹಗಳು ಕೆಲವೊಮ್ಮೆ ವಿಕೋಪಕ್ಕೆ ತಿರುಗುವುದು ಸಹಜ. ಆದರೆ ಇಲ್ಲಿ ಬೆಳಗಿನ ಉಪಾಹಾರ ನೀಡದ್ದಕ್ಕೆ ಸೊಸೆಯನ್ನು ಮಾವ ಕೊಲೆ ಮಾಡಿದ್ದಾರೆ.
ಬಳಿಕ 76 ವರ್ಷದ ಆರೋಪಿ ಪೊಲೀಸರಿಗೆ ಶರಣಾಗಿದ್ದಾರೆ. ಗುಂಡೇಟು ತಗುಲಿದ್ದ ಸೊಸೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.