ಪಂಜಾಬ್: ಗಂಡ-ಹೆಂಡಿರ ಜಗಳದಿಂದಾಗಿ ಕೂಸು ಬಲಿಯಾದ ಕತೆ ಪಂಜಾಬ್ ನ ಹೋಶಿಯಾರ್ ಪುರದಲ್ಲಿ ನಡೆದಿದೆ.
ಹೆಂಡತಿ ಜೊತೆ ಕಿತ್ತಾಡಿದ ಬಳಿಕ ಗಂಡ ನಾಲ್ಕೂವರೆ ವರ್ಷದ ಮಗನನ್ನೇ ಕೊಂದ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ತಂದೆಯನ್ನು ಬಂಧಿಸಲಾಗಿದೆ.
ಪತಿ-ಪತ್ನಿ ಜೊತೆ ಜಗಳವಾದ ಬಳಿಕ ಪತ್ನಿ ಮನೆ ಬಿಟ್ಟು ಹೋಗಲು ತಯಾರಾಗಿದ್ದಳು. ಈ ವೇಳೆ ಮಗು ಅಳುತ್ತಿತ್ತು. ಈ ಕೋಪದಲ್ಲಿ ಪತಿ ಮಗುವನ್ನು ನೆಲಕ್ಕೆ ಬಿಸಾಕಿದ್ದ. ನೆಲಕ್ಕೆ ಬಿದ್ದ ರಭಸಕ್ಕೆ ಮಗು ಸಾವನ್ನಪ್ಪಿತ್ತು.