ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ತಂದೆಗೆ 25 ವರ್ಷ ಜೈಲು
ಮೊಮ್ಮಗಳಿಗೆ ನ್ಯಾಯ ಕೊಡಿಸಲು ಆಕೆಯ ಅಜ್ಜಿ ಇಷ್ಟು ದಿನ ಕಾನೂನು ಹೋರಾಟ ನಡೆಸಿದ್ದರು. ಕೌಟುಂಬಿಕ ಕಲಹದಿಂದಾಗಿ ಅಪ್ರಾಪ್ತೆಯ ತಾಯಿ, ತಂದೆಯಿಂದ ಪ್ರತ್ಯೇಕವಾಗಿದ್ದಳು. ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ವಿಚಾರ ತಿಳಿದ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದಳು.
ರಕ್ಷಿಸಬೇಕಾಗಿದ್ದ ತಂದೆಯೇ ಅತ್ಯಾಚಾರವೆಸಗಿದ್ದು ನೋವಿನ ಸಂಗತಿ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ನ್ಯಾಯಕ್ಕಾಗಿ ಹೋರಾಡಿದ ಅಜ್ಜಿಯನ್ನು ಪ್ರಶಂಸಿಸಿದ್ದಾರೆ.