ಆನ್ ಲೈನ್ ಕ್ಲಾಸ್ ಗೆ ಹಾಜರಾಗದ ಮಗನನ್ನು ಸುಟ್ಟು ಬೂದಿ ಮಾಡಿದ ತಂದೆ!
ಶುಕ್ರವಾರ, 22 ಜನವರಿ 2021 (07:53 IST)
ಹೈದರಾಬಾದ್: ಓದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಆನ್ ಲೈನ್ ಕ್ಲಾಸ್ ಗೆ ಹಾಜರಾಗುತ್ತಿಲ್ಲ ಎಂಬ ಸಿಟ್ಟಿಗೆ ತಂದೆಯೊಬ್ಬ ಹೆತ್ತ ಮಗನನ್ನೇ ಬೆಂಕಿಗೆ ಆಹುತಿ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
12 ವರ್ಷದ ಬಾಲಕ ತೀವ್ರ ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾನೆ. ತಂದೆಯಿಂದ ಬೆಂಕಿ ತಗುಲಿಸಿಕೊಂಡ ಬಾಲಕ ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಬಂದಿದ್ದ. ಈ ವೇಳೆ ಆತನ ತಾಯಿ, ನೆರೆಹೊರೆಯವರು ಬೆಂಕಿ ನಂದಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದೀಗ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.