ಮಹಿಳೆಯ ಶೀಲಕೆಡಿಸಿದ ಅಪ್ಪ-ಮಗನ ಜೋಡಿ ಕೊನೆಗೆ ಮಾಡಿದ್ದೇನು?!

ಭಾನುವಾರ, 28 ಫೆಬ್ರವರಿ 2021 (09:42 IST)
ಲಕ್ನೋ: ವಿವಾಹಿತ ಮಹಿಳೆಯೊಬ್ಬಳನ್ನು ತಂದೆ-ಮಗನ ಜೋಡಿಯೊಂದು ಶೀಲಕೆಡಿಸಿದ್ದಲ್ಲದೆ, ಜೀವಂತ ದಹನ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ತವರಿಗೆ ಹೋಗಲು ತನ್ನ ಟಾಂಗಾ ಏರಿದ್ದ ಮಹಿಳೆಯನ್ನು 55 ವರ್ಷದ ಆರೋಪಿ ತನ್ನ ಪುತ್ರನ ಜೊತೆ ಸೇರಿಕೊಂಡು ಸಾಮೂಹಿಕ ಮಾನಭಂಗ ಮಾಡಿದ್ದಾನೆ. ಬಳಿಕ ಆಕೆಯನ್ನು ಜೀವಂತ ದಹನ ಮಾಡಲೆತ್ನಿಸಿದ್ದಾರೆ. ಆದರೆ ಈ ವೇಳೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದು, ಸುಟ್ಟ ಗಾಯಗಳಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ