ಅತ್ಯಾಚಾರ ಆರೋಪಿ ಮಾಜಿ ಸಚಿವ ಪ್ರಜಾಪತಿ ಅರೆಸ್ಟ್!

ಬುಧವಾರ, 15 ಮಾರ್ಚ್ 2017 (09:26 IST)
ಲಕ್ನೋ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸೋಲುತ್ತಿದ್ದಂತೆ ಅಖಿಲೇಶ್ ಯಾದವ್ ಸಂಪುಟದಲ್ಲಿದ್ದ ಅತ್ಯಾಚಾರ ಆರೋಪಿ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಬಂಧನಕ್ಕೊಳಗಾಗಿದ್ದಾರೆ.

 
ಇಷ್ಟು ದಿನ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಪ್ರಜಾಪತಿ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದರು. ಸ್ವತಃ ಸುಪ್ರೀಂ ಕೋರ್ಟ್ ಅಖಿಲೇಶ್ ಯಾದವ್ ಗೆ ಇಂತಹ ಒಬ್ಬ ನಾಯಕನನ್ನು ಮಂತ್ರಿ ಮಂಡಲದಲ್ಲಿ ಉಳಿಸಿಕೊಂಡಿರುವುದಕ್ಕೆ ಛೀಮಾರಿ ಹಾಕಿತ್ತು.

ಕೊನೆಗೂ ಪ್ರಜಾಪತಿ ಇಂದು ಲಕ್ನೋದಲ್ಲಿ ಪೊಲೀಸರ ಬಲೆಗೆ ಬಿದ್ದಿರುವುನ್ನು ಪೊಲೀಸ್ ವರಿಷ್ಠಾಧಿಕಾರಿ ಮಂಝಿಲ್ ಸಾಯ್ನಿ ಖಚಿತಪಡಿಸಿದ್ದಾರೆ. ಸಚಿವರಾಗಿದ್ದಾಗಲೇ ತಮ್ಮ ಸಹಾಯಕರ ಜತೆಗೂಡಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಪ್ರಜಾಪತಿ ಸಿಲುಕಿಕೊಂಡಿದ್ದರು. ಇದೀಗ ಸಮಾಜವಾದಿ ಪಕ್ಷ ಅಧಿಕಾರ ಕಳೆದುಕೊಂಡ ತಕ್ಷಣ ಪ್ರಜಾಪತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ