ರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಸಿದ ದ್ರೌಪದಿ ಮರ್ಮುಗೆ ಪ್ರಧಾನಿ ಸಾಥ್!

ಶುಕ್ರವಾರ, 24 ಜೂನ್ 2022 (14:10 IST)
ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ದ್ರೌಪದಿ ಮರ್ಮು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮುಂತಾದವರು ಉಪಸ್ಥಿತರಿರುವ ಮೂಲಕ ಬೆಂಬಲ ನೀಡಿದರು.
ದೇಶದ ಅತ್ಯಂತ ಕೆಳ ಸಮುದಾಯದ ಬುಡಕಟ್ಟು ಜನಾಂಗದ ಮಹಿಳೆ ಆಗಿರುವ ದ್ರೌಪದಿ ಮರ್ಮು ಜುಲೈ ೧೮ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ದೆಹಲಿಯಲ್ಲಿ ಚುನಾವಣಾಧಿಕಾರಿ ನಾಮಪತ್ರ ಸಲ್ಲಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಶೇಷ ಅಂದರೆ ದ್ರೌಪದಿ ಮರ್ಮು ರಾಷ್ಟ್ರಪತಿ ಅಭ್ಯರ್ಥಿಯಾಗಿ ಮೊದಲ ಸೂಚಕರಾಗಿ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದರೆ ಎರಡನೇ ಸೂಚಕರಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಹಿ ಹಾಕಿದರು.
ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ೫೦ ಜನಪ್ರತಿನಿಧಿಗಳು ಸೂಚಕರು ಹಾಗೂ ೫೦ ಬೆಂಬಲ ಸೂಚಿಸಿ ಸಹಿ ಹಾಕಬೇಕಿದೆ.  ಮರ್ಮುಗೆ ಸೂಚಕರಾಗಿ ಸಹಿ ಹಾಕಿದವರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸೇರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ