ಈ ಕಾರಣದಿಂದ ಮಹಿಳೆಯ ಮೇಲೆ ಬಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ
ಗುರುವಾರ, 3 ಡಿಸೆಂಬರ್ 2020 (07:19 IST)
ಅಜ್ಮೀರ್ : 40 ವರ್ಷದ ಮಹಿಳೆಯೊಬ್ಬಳ ದೇಹದಲ್ಲಿ ಮಾಟಗಾರ್ತಿ ಸೇರಿ ಕೊಂಡಿದ್ದಾಳೆಂದು ಆಕೆಯನ್ನು ಬಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ ಘಟನೆ ರಾಜಸ್ಥಾನದ ಭಿಲ್ವಾರಾದ ಶಹಪುರ್ ಬ್ಲಾಕ್ ನ ಕುಂಡಿಯಾ ಗ್ರಾಮದ ದೇವಸ್ಥಾನದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮಹಿಳೆಗೆ ಚಲನಿಯಾ ದೇವಸ್ಥಾನಕ್ಕೆ ಹೋಗಿದ್ದಾಗ ಮಾಟಗಾರ್ತಿ ತನ್ನೊಳಗೆ ಸೇರಿಕೊಂಡಿದ್ದಾಳೆ ಎಂದು ಹೇಳಿದ್ದಾಳೆ. ಈ ಹಿನ್ನಲೆಯಲ್ಲಿ ಆಕೆಯ ದೇಹದಿಂದ ಮಾಟಗಾರ್ತಿಯನ್ನು ಹೊರಹಾಕಲು ಐವರು ಸೇರಿ ಆಕೆಯನ್ನು ದೇವಾಲಯದೊಳಗೆ ಕರೆದುಕೊಂಡು ಹೋಗಿ ಬಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಮಹಿಳೆ ಮೂರ್ಛೆ ತಪ್ಪಿ ಕೆಳಗೆ ಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಳಿಸಲಾಗಿದೆ.
ಈ ಬಗ್ಗೆ ಮಹಿಳೆಯ ಸಂಬಂಧಿಕರು ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.