ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮುಸ್ಲೀಂ ಆಗಿರಲಿಲ್ಲ: ತೋಹಿದ್‌ ಜಮಾತ್‌

ಸೋಮವಾರ, 31 ಜುಲೈ 2017 (13:02 IST)
ಚೆನ್ನೈ: ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಮುಸ್ಲಿಂ ಎಂದೂ ಪರಿಗಣಿಸಿಲ್ಲ. ಕಲಾಂ ಅವರ ಪ್ರತಿಮೆ ಬಳಿ 'ಭಗವದ್ಗೀತೆ' ಇಟ್ಟರೆ ಯಾವುದೇ ಸಮಸ್ಯೆ ಇಲ್ಲ ಎಂದು ತಮಿಳುನಾಡು ತೋಹಿದ್‌ ಜಮಾತ್‌ (TNTJ) ಸಂಸ್ಥಾಪಕ ಪಿ.ಜೈನುಲ್‌ ಅಬಿದ್ದೀನ್‌ ಅಭಿಪ್ರಾಯಪಟ್ಟಿದ್ದಾರೆ.
 
ತಮಿಳುನಾಡಿನ ರಾಮೇಶ್ವರಂ ಕಲಾಂ ಅವರ ಹುಟ್ಟೂರು ಬಳಿ ಸ್ಥಾಪಿಸಲಾಗಿರುವ ಸ್ಮಾರಕದಲ್ಲಿ ಕಲಾಂ ಪ್ರತಿಮೆ ಪಕ್ಕ 'ಭಗವದ್ಗೀತೆ' ಇಟ್ಟ ಬಗ್ಗೆ ವಿವಾದ ಹುಟ್ಟಿಕೊಂಡಿರುವ ಬೆನ್ನಲ್ಲೇ ತಮಿಳುನಾಡು ತೋಹಿದ್‌ ಜಮಾತ್‌ ಈ  ಹೇಳಿಕೆ ನೀಡಿದೆ.  
 
ಸೇಲಂನಲ್ಲಿ ಮಾತನಾಡಿರುವ ಜೈನುಲ್‌ ಅಬಿದ್ದೀನ್‌, 'ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಮುಸ್ಲಿಂ ಅಂತಾ ಎಂದೂ ಪರಿಗಣಿಸಿಲ್ಲ. ಅವರ ಹೆಸರು ಮಾತ್ರವೇ ಅಬ್ದುಲ್ ಕಲಾಂ. ಅವರು ಎಂದೂ ಇಸ್ಲಾಂ ಧರ್ಮವನ್ನು ಪಾಲಿಸಿರಲಿಲ್ಲ. ಅವರು ನಗ್ನ ದೇವತೆಗಳನ್ನು ಪ್ರಾರ್ಥಿಸಿದರು ಹಾಗೂ ಅನೇಕ ಮುಸ್ಲಿಮೇತರ ಆಚರಣೆಗಳನ್ನೇ ಅನುಸರಿಸಿದ್ದರು' ಎಂದು ಹೇಳಿದ್ದಾರೆ.  ದೇಶಕ್ಕೆ ದುಡಿದ ಅನೇಕ ವಿಜ್ಞಾನಿಗಳ ಪೈಕಿ ಕಲಾಂ ಒಬ್ಬರು. ಅವರು ರಾಷ್ಟ್ರಪತಿ ಆಗೋವರಿಗೂ ಜನರಿಗೆ ಕಲಾಂ ಯಾರೆಂಬುವುದೇ ತಿಳಿದಿರಲಿಲ್ಲ.  ಮುಂದೆ ಯಾರದ್ರೂ ಕಲಾಂ ಪ್ರತಿಮೆ ಬಳಿ ಭಗವದ್ಗೀತೆ ಇಡಲಾಗಿದೆ ಎಂದು ಹೇಳಿದರೆ ಅದರ ಬಗ್ಗೆ ಚಿಂತಿಸಿಬೇಕಿಲ್ಲ ಇದನ್ನು ಸುಮ್ಮನೆ ನಿರ್ಲಕ್ಷಿಸಿ ಎಂದು ಜೈನುಲ್‌ ಅಬಿದ್ದೀನ್‌ ಸಲಹೆ ನೀಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ