ದೆಹಲಿಯಲ್ಲಿ ಕೋವಿಡ್ ಕೇಸ್‌ಗಳಲ್ಲಿ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರವು ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ನಿರ್ಧರಿಸಿದೆ.
ಫೆ. 7 ರಿಂದ ಎಲ್ಲ ಉನ್ನತ ಶಿಕ್ಷಣ ಕೇಂದ್ರ ಹಾಗೂ 9-12 ನೇ ತರಗತಿಗಳನ್ನು ಆರಂಭಿಸಲಾಗುವುದು. ಫೆ. 14 ರಿಂದ ನರ್ಸರಿಯಿಂದ ಪ್ರಾಥಮಿಕ ಶಾಲೆಯ ಎಲ್ಲ ತರಗತಿಗಳನ್ನು ಆರಂಭಿಸಲಾಗುವುದು.
ಜಿಮ್‌ಗಳ ಆರಂಭಕ್ಕೂ ಸಮ್ಮತಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಅದೇ ರೀತಿ ರಾಜಸ್ಥಾನ ಸರ್ಕಾರವು ಕೋವಿಡ್ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳಲು ಮುಂದಾಗಿದ್ದು, ಫೆ. 10 ರಿಂದ 5 ರಿಂದ 9ನೇ ತರಗತಿಯವರಿಗೆ ಶಾಲೆಗಳನ್ನು ಆರಂಭಿಸಲಿದೆ. ಈಗಾಗಲೇ ಫೆ. 1 ರಿಂದ 10 ರಿಂದ 12 ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ತೆರೆಯಲಾಗಿದೆ.