ಪೊಲೀಸರ ಸೋಗಿನಲ್ಲಿ ದರೋಡೆ ಮಾಡುತ್ತಿದ್ದವರು ಅಂದರ್

ಗುರುವಾರ, 11 ನವೆಂಬರ್ 2021 (09:20 IST)
ಬೆಂಗಳೂರು: ಪೊಲೀಸರಂತೆ ವೇಷ ಹಾಕಿಕೊಂಡು ದರೋಡೆ ಮಾಡುತ್ತಿದ್ದ ಆರು ಮಂದಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕರನ್ನು ಕರೆಸಿಕೊಳ್ಳುತ್ತಿದ್ದ ಆರೋಪಿಗಳು ಅವರಿಂದ ಮೊಬೈಲ್, ಹಣ ಕಸಿದುಕೊಂಡು ಪರಾರಿಯಾಗುತ್ತಿದ್ದರು.

ಬಂಧಿತರಿಂದ 2 ಕಾರು, ಮೊಬೈಲ್, ನಗದು ವಶಪಡಿಸಿಕೊಳ್ಳಲಾಗಿದೆ. ಕಳೆದ ವಾರವಷ್ಟೇ ಉತ್ತರ ಕರ್ನಾಟಕ ಮೂಲದ ಯುವತಿಗೆ 10 ಲಕ್ಷ ರೂ. ವಂಚನೆ ಮಾಡಿದ್ದರು ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ