ಮಹಿಳೆಯ ಮೇಲೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ, ಧನಕನಕ ಲೂಟಿ

ಮಂಗಳವಾರ, 8 ನವೆಂಬರ್ 2016 (14:44 IST)
ಚಲಿಸುವ ಕಾರಿನಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರಗೈದು ಆಕೆಯ ಬಳಿ ಇದ್ದ ಹಣ ಮತ್ತು ಬಂಗಾರವನ್ನು ದರೋಡೆಗೈದು ಪರಾರಿಯಾದ ಹೇಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 
 
ಸೋಮವಾರ ಈ ಘಟನೆ ನಡೆದಿದ್ದು ಮಹಿಳೆ ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಆಕೆಗೆ ಪರಿಚಿತನಾಗಿದ್ದ ವ್ಯಕ್ತಿಯೊಬ್ಬ ಕಾರ್ ತಂದು ಆಕೆಯ ಬಳಿ ನಿಲ್ಲಿಸಿ ಡ್ರಾಪ್ ಕೊಡುವುದಾಗಿ ಹೇಳಿದ್ದಾನೆ. ಅದಕ್ಕೊಪ್ಪಿದ ಮಹಿಳೆ ಕಾರನ್ನೇರಿದ್ದು ಅದಾಗಲೇ ಮತ್ತೆ ಮೂವರು ಆ ಕಾರಿನಲ್ಲಿದ್ದರು. ದಾರಿ ಮಧ್ಯೆ ಆಕೆಗೆ ಮತ್ತು ತರಿಸುವ ಪಾನೀಯ ನೀಡಿದ ಅವರು ಆಕೆ ಪ್ರಜ್ಞೆ ತಪ್ಪುತ್ತಿದ್ದಂತೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. 
 
ಅಷ್ಟೇ ಅಲ್ಲದೇ ಆಕೆಯ ಕಿವಿ ಓಲೆ, 4,000 ರೂಪಾಯಿಯನ್ನು ಲೂಟಿ ಮಾಡಿದ್ದಾರೆ. 
 
ಆರೋಪಿಗಳ ವಿರುದ್ದ ದೂರು ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ