ಮಂಗಳೂರು, ಕಾರವಾರ ಸಮುದ್ರತಳದಲ್ಲಿ ಅಪಾರ ಪ್ರಮಾಣದ ನಿಧಿ ಪತ್ತೆ ಹಚ್ಚಿದ ವಿಜ್ಞಾನಿಗಳು..!

ಸೋಮವಾರ, 17 ಜುಲೈ 2017 (12:30 IST)
ಭೂಗರ್ಭ ಶಾಸ್ತ್ರದ ವಿಜ್ಞಾನಿಗಳು ಭಾರತದ ಸಾಗರ ತಳದಲ್ಲಿ ಅಪಾರ ಪ್ರಮಾಣದ ಅಮೂಲ್ಯ ಲೋಹಗಳು ಮತ್ತು ಖನಿಜಗಳು ಇರುವುದನ್ನ ಪತ್ತೆ ಹಚ್ಚಿದ್ದಾರೆ.

2014ರಲ್ಲೇ ಮಂಗಳೂರು. ಮನ್ನಾರ್, ಅಂಡಮಾನ್ ಮತ್ತು ನಿಕೋಬರ್ ದ್ವೀಪ, ಲಕ್ಷ್ದ್ವೀಪದ ಸಾಗರದಲ್ಲಿ ಅಪಾರ ಪ್ರಮಾಣದ ಸಾಗರ ಸಂಪನ್ಮೂಲಗಳಿರುವ ಬಗ್ಗೆ 2014ರಲ್ಲೇ ಗುರ್ತಿಸಲಾಗಿದ್ದು, ಈ ಪ್ರದೇಶದಲ್ಲಿ ಕಂಡುಬಂದಿರುವ ಸುಣ್ಣದ ಮಣ್ಣು, ಫಾಸ್ಫೇಟ್-ಭರಿತ ಮತ್ತು ಕ್ಯಾಲ್ಯುರಿಯಸ್ ಸಂಚಯಗಳು, ಹೈಡ್ರೋಕಾರ್ಬನ್`ಗಳು, ಮೆಟಾಲಿಫರಸ್ ನಿಕ್ಷೇಪಗಳು ಮತ್ತು ಮೈಕ್ರೋಮುದ್ರದ ತಳದ ನಾಡಲ್`ಗಳು ಕಂಡು ಬಂದಿರುವುದು ಆಳ ದೊಡ್ಡ ಸಂಪತ್ತು ಇರಬಹುದಾದ  ಸ್ಪಷ್ಟ ಸೂಚನೆಯಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.

3 ವರ್ಷಗಳ ಶೋಧದ ವಿಜ್ಞಾನಿಗಳು 181,025 ಚದರ ಕಿ.ಮೀ ಸಮುದ್ರ ತಳದ ಹೈರೆಸಲೂಶನ್ ಡೇಟಾ ಸಂಗ್ರಹಿಸಿದ್ದಾರೆ. ಕಾರವಾರ, ಮಂಗಳೂರಿನ ಮತ್ತು ಚೆನ್ನೈ ಕಡಲತೀರಗಳ ಫಾಸ್ಫೇಟ್ ಕೆಸರು, ತಮಿಳುನಾಡು ಕರಾವಳಿಯ ಮನ್ನಾರ್ ಬೇಸಿನ್ ನ ಚಾನಲ್-ಲೆವಿ ಸಿಸ್ಟಮ್ನಲ್ಲಿ ಅನಿಲ ಹೈಡ್ರೇಟ್, ಅಂಡಮಾನ್ ಸಮುದ್ರದಿಂದ ಕೋಬಾಲ್ಟ್-ಹೊಂದಿರುವ ಫೆರೋ-ಮ್ಯಾಂಗನೀಸ್ ಕ್ರಸ್ಟ್ ಮತ್ತು ಲಕ್ಷದ್ವೀಪ ಸಮುದ್ರದ ಸುತ್ತಲೂ ಸೂಕ್ಷ್ಮ-ಮ್ಯಾಂಗನೀಸ್ ಗಂಟುಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ