ಗೋವಾ ನಗದು ರಹಿತ ಹಾಗು ಶೇ.100ರಷ್ಟು ಡಿಜಿಟಲೀಕರಣಗೊಂಡ ವ್ಯವಹಾರದ ರಾಜ್ಯವಾಗಲಿದೆ-ಮನೋಹರ್ ಪರಿಕ್ಕರ್

ಬುಧವಾರ, 31 ಜನವರಿ 2018 (06:58 IST)
ಗೋವಾ : ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಈ ವರ್ಷದ ಅಕ್ಟೋಬರ್ ನಿಂದ ಗೋವಾ ರಾಜ್ಯ ನಗದು ರಹಿತ ಹಾಗು ಶೇ.100ರಷ್ಟು ಡಿಜಿಟಲೀಕರಣಗೊಂಡ ವ್ಯವಹಾರದ ರಾಜ್ಯವಾಗಲಿದೆ ಎಂದು ನಬಾರ್ಡ್ ಆಯೋಜಿಸಿದ್ದ ಕಾರ್ಯಕ್ರಮಯೊಂದರಲ್ಲಿ ಹೇಳಿದ್ದಾರೆ.

 
‘ಮುಂದಿನ ತಿಂಗಳು ರಾಜ್ಯ ವಿಧಾನ ಸಭೆಯಲ್ಲಿ ಮಂಡನೆಯಾಗಲಿರುವ 2018-19 ರ ಬಜೆಟ್ ನಲ್ಲಿ ಶೇ.100ರಷ್ಟು ಡಿಜಿಟಲೀಕರಣದ ವಿವರ ನೀಡಲಾಗುವುದು. ಕಡಿಮೆ ನಗದು ಅಂದರೆ ಕಡಿಮೆ ಭ್ರಷ್ಟಾಚಾರ ಹಾಗೂ ರಾಜ್ಯದ ಆದಾಯದಲ್ಲಿ ಹೆಚ್ಚಳ’ ‘ ಎಂದು ಹೇಳಿದ್ದಾರೆ. ಹಾಗೆ’ ಅಕ್ಟೋಬರ್ ತಿಂಗಳ ಬಳಿಕ ತುರ್ತು ಸಂದರ್ಭ ಹೊರತುಪಡಿಸಿ ಸರಕಾರದ ಯಾವುದೇ ಪಾವತಿ ಅಥವಾ ಸ್ವೀಕೃತಿ ನಗದು ರೂಪದಲ್ಲಿ  ಇರುವುದಿಲ್ಲ. ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆಯತ್ತ ನಾವು ಸಾಗುತ್ತಿದ್ದೇವೆ. ಎಪ್ರಿಲ್ 1 ರ ಬಳಿಕದ ಆರು ತಿಂಗಳಲ್ಲಿ ನಾವು ಸಂಪೂರ್ಣ ಡಿಜಿಟಲೀಕರಣ ವ್ಯವಸ್ಥೆಯನ್ನು ಹೊಂದಿರುತ್ತೇವೆ ಎಂದು ತಿಳಿಸಿದ್ದಾರೆ.

 
ಈಗಾಗಲೇ ಸರಕಾರ ಡಿಜಿಟಲ್ ಪಾವತಿ ವ್ಯವಸ್ಥೆ ಅಥವಾ ಇ-ವ್ಯವಸ್ಥೆಗೆ ರೂಪಾಂತರಗೊಂಡಿದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ಪಾವತಿ ಸ್ವೀಕರಿಸಲು ಬೃಹತ್ ಪ್ರಮಾಣದಲ್ಲಿ ಪಿಒಎಸ್ ಯಂತ್ರಗಳ ಅಗತ್ಯವಿದ್ದು, 650 ಪಿಒಎಸ್ ಯಂತ್ರಗಳ ಪೂರೈಕೆಗೆ ಈಗಾಗಲೇ ಎಸ್.ಬಿ.ಐ. ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಇವು ಸಾಕಾಗದು ಎಂದು ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತಿಳಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ