ರಿಲಯನ್ಸ್ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್!

ಸೋಮವಾರ, 27 ಮಾರ್ಚ್ 2017 (12:26 IST)
ಬೆಂಗಳೂರು: ರಿಲಯನ್ಸ್ ಸಂಸ್ಥೆಯ ಜಿಯೋ ಪ್ಲ್ಯಾನ್ ಪ್ರೈಮ್ ಮೆಂಬರ್ ಶಿಪ್ ಗೆ ಇನ್ನೂ ಸದಸ್ಯರಾಗಿಲ್ಲವೇ?  ಇನ್ನೂ ಅದಕ್ಕೆ ಅವಕಾಶವಿದೆ!

 

ಹೌದು. ರಿಲಯನ್ಸ್ ಸಂಸ್ಥೆ ತನ್ನ ಜಿಯೋ ಗ್ರಾಹಕರಿಗೆ ಪ್ರಾಥಮಿಕ ಸದಸ್ಯತ್ವ ಅವಧಿ ವಿಸ್ತರಿಸುವ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈ ಮೊದಲು ಮಾರ್ಚ್ 31 ರೊಳಗೆ ಸದಸ್ಯತ್ವ ಪಡೆಯಬೇಕೆಂದಿತ್ತು. ಆದರೆ ಇದು ಒಂದು ತಿಂಗಳು ಮುಂದೂಡುವ ಸಾಧ್ಯತೆಯಿದೆ.

 
ಗ್ರಾಹಕರು 99 ರೂ. ಪಾವತಿಸಿ ಒಂದು ವರ್ಷದ ಪ್ರಾಥಮಿಕ ಸದಸ್ಯತ್ವ ಪಡೆಯಬಹುದಾಗಿದೆ. ಪ್ರಾಥಮಿಕ ಸದಸ್ಯತ್ವ ಪಡೆಯಲು ಮಾರ್ಚ್ 31 ರವರೆಗೆ ಡೆಡ್ ಲೈನ್ ಇತ್ತು. ಇದೀಗ ಒಂದು ತಿಂಗಳು ವಿಸ್ತರಣೆಯಾದರೆ, ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ