ಒಂದೂವರೆ ವರ್ಷಗಳಲ್ಲಿ ಅಂತರ ಸಚಿವಾಲಯ ಸಮಿತಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜತೆ ಸಭೆ ನಡೆಸಿತ್ತು. ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮಂಡಿಸಿವೆ. ಕೆಲವು ಕಾರ್ಮಿಕ ಸಂಬಂಧಿತ ಮತ್ತು ಇನ್ನೂ ಕೆಲವು ಆರ್ಥಿಕ ನೀತಿ ವಿಷಯಗಳಿಗೆ ಸಂಬಂಧಿಸಿವೆ. ಶಿಫಾರಸುಗಳ ಆಧಾರದ ಮೇಲೆ ಸರ್ಕಾರ ಕೆಲವು ನಿರ್ಧಾರಗಳನ್ನು ಕೈಗೊಂಡಿದೆ ಎಂದು ಜೇಟ್ಲಿ ವಿವರಿಸಿದರು.