ಗೋಹತ್ಯೆ ಮಾಡಿದರೆ ಜೀವಾವಧಿ ಶಿಕ್ಷೆ

ಶುಕ್ರವಾರ, 31 ಮಾರ್ಚ್ 2017 (14:53 IST)
ಗೋಹತ್ಯೆ ಮಾಡಿದರೆ ಜೀವಾವಧಿ ಶಿಕ್ಷೆ ಕೊಡುವ ತಿದ್ದುಪಡಿ ಕಾಯ್ದೆಯನ್ನ ಗುಜರಾತ್ ವಿಧಾನಸಭೆ ಅಂಗೀಕರಿಸಿದೆ. ತಿದ್ದುಪಡಿಗೆ ಅನುಮೋದನೆ ಪಡೆದ ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆ-1954ರಲ್ಲಿ ದನಗಳನ್ನ ಸಾಗಿಸುವವರಿಗೆ 10 ವರ್ಷ ಶಿಕ್ಷೆ ವಿಧಿಸುವ ಕಠಿಣ ಕಾನೂನನ್ನೂ ಒಳಗೊಂಡಿದೆ.
 

2011ರ ತಿದ್ದುಪಡಿಯಲ್ಲಿ ಗೋಹತ್ಯೆಗೆ 7 ವರ್ಷ ಶಿಕ್ಷೆ ವಿಧಿಸುವ ಕಾಯ್ದೆಯನ್ನ ಮಾಡಲಾಗಿತ್ತು. ಇದೀಗ, ಕಾಯ್ದೆಯನ್ನ ಮತ್ತಷ್ಟು ಕಠಿಣಗೊಳಿಸಿ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಸೇರಿಸಲಾಗಿದೆ. ದಂಡವನ್ನ ಸಹ 50 ಸಾವಿರಕ್ಕೆ ಏರಿಸಲಾಗಿದೆ.

ಈ ವರ್ಷಾಂತ್ಯಕ್ಕೆ ಗುಜರಾತ್ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು ಸರ್ಕಾರದ ಈ ಕಠಿಣ ನಿರ್ಧಾರ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ