ಗುಜರಾತ್ ಸ್ಪೋಟದ ಕಿಂಗ್ ಪಿನ್ ಬೆಳಗಾವಿಯಲ್ಲಿ ಅರೆಸ್ಟ್

ಮಂಗಳವಾರ, 21 ಜೂನ್ 2016 (12:41 IST)
2008ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಕಿಂಗ್ ಪಿನ್ ನಾಸೀರ್ ರಂಗ್ರೇಜ್(38)ನನ್ನು ಗಡಿ ನಾಡು  ಬೆಳಗಾವಿಯಲ್ಲಿ ಬಂಧಿಸಲಾಗಿದೆ.  ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಸ್ಥಳೀಯ ಪೊಲೀಸರೊಂದಿಗೆ ಈ ಕಾರ್ಯಾಚರಣೆಯನ್ನು ನಡೆಸಿತ್ತು. 
 
ಆರೋಪಿಯನ್ನು ನಗರದ ಬಡ್ಕರ್‌ಗಲ್ಲಿಯಲ್ಲಿರುವ ನಿವಾಸದಿಂದ ಎಟಿಎಸ್ ಇನ್ಸಪೆಕ್ಟರ್ ಭವೇಶ್ ಬಂಧಿಸಿದ್ದಾರೆ. ಆತ ಕಳೆದ ಮೂರು ನಾಲ್ಕು ವರ್ಷದಿಂದ ತನ್ನ ಕುಟುಂಬದೊಂದಿಗೆ ಇಲ್ಲಿ ವಾಸಿಸುತ್ತಿದ್ದ ಎಂದು ಡಿಸಿಪಿ( ಅಪರಾಧ ಮತ್ತು ಸಂಚಾರ) ಅಮರನಾಥ್ ರೆಡ್ಡಿ ತಿಳಿಸಿದ್ದಾರೆ. 
 
ಗುಜರಾತ್ ರಾಜಧಾನಿಯಲ್ಲಿ ಜುಲೈ 26, 2008ರಲ್ಲಿ ಸಂಭವಿಸಿದ್ದ 21 ಸರಣಿ ಬಾಂಬ್ ಸ್ಪೋಟದಲ್ಲಿ 56 ಜನರು ದುರ್ಮರಣವನ್ನಪ್ಪಿ 200 ಜನರು ಗಾಯಗೊಂಡಿದ್ದರು. 
 
ಸ್ಪೋಟದ ನಂತರ ತನ್ನ ವಾಸಸ್ಥಳವನ್ನು ಬದಲಾಯಿಸಿದ್ದ ನಾಸೀರ್ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಬೆಳಗಾವಿಯಲ್ಲಿ ವಾಸವಾಗಿದ್ದ. ಚಪಾತಿ ಮಾಡಿ ಅದನ್ನು ರೆಸ್ಟೋರೆಂಟ್‌ಗಳಿಗೆ ಪೂರೈಸುವುದರ ಮೂಲಕ  ಕುಟುಂಬ ಜೀವನ ನಿರ್ವಹಣೆ ಮಾಡುತ್ತಿತ್ತು.
ಆಟೋರಿಕ್ಷಾ ಓಡಿಸುವ ನಾಸೀರ್ ಅದರಲ್ಲಿ ಹೊಟೆಲ್‌ಗಳಿಗೆ ಚಪಾತಿ ಸಾಗಿಸುತ್ತಿದ್ದ.
 
ಗ್ರೋಧೋತ್ತರ ದಂಗೆಗಳಿಗೆ ಪ್ರತೀಕಾರವಾಗಿ ನಾಸೀರ್ ಈ ಕೃತ್ಯವನ್ನೆಸಗಿದ್ದ. 

ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ