ಗುಜರಾತ್‌ನಲ್ಲಿ ಮತ್ತೆ ಮುಸ್ಲಿಮರನ್ನು ಬೆದರಿಸುವ ತಂತ್ರ: ವೈರಲ್ ಆದ ಕೋಮುವಾದ ವಿಡಿಯೋ

ಭಾನುವಾರ, 19 ನವೆಂಬರ್ 2017 (16:25 IST)
ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ಮತದಾರರನ್ನು ಓಲೈಸಿಕೊಳ್ಳುವ ಇಲ್ಲವೇ ಬೆದರಿಸುವ ತಂತ್ರಗಳು ನಡೆಯುತ್ತಿರುವುದು ವಿಷಾದಕರವಾಗಿದೆ.
 
ಇದೀಗ ಮತ ನೀಡದಿದ್ದಲ್ಲಿ ಮುಂದೆ ಕಾದಿದೆ ಅಪಾಯ. 2002ರ ದಂಗೆ ಮರುಕಳಿಸಬಹುದು ಏನ್ನುವ ರೀತಿಯಲ್ಲಿ ಮುಸ್ಲಿಮರನ್ನು ಬೆದರಿಸುವ ವಿಡಿಯೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.  
 
ವಕೀಲರು, ಸಾಮಾಜಿಕ ಕಾರ್ಯಕರ್ತರಾಗಿರುವ ಗೋವಿಂದ ಪರ್ಮಾರ್ ಸಲ್ಲಿಸಿದ ದೂರಿನ ಮೇರೆಗೆ ಸೋಶಿಯಲ್ ಮೀಡಿಯಾದಲ್ಲಿ ಸುತ್ತುತ್ತಿರುವ ಮತ್ತು ಕೋಮುವಾದಿಯಾಗಿರುವ ವೀಡಿಯೊ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗ ಆದೇಶಿಸಿದೆ.
 
ಗುಜರಾತ್ ಅಸೆಂಬ್ಲಿ ಚುನಾವಣೆಗಳ ಮುಂಚೆ ಕೋಮು ದ್ವೇಷವನ್ನು ಪ್ರಚೋದಿಸುವ ಇಂತಹ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ, ಗುಜರಾತ್ ಮುಖ್ಯ ಚುನಾವಣಾಧಿಕಾರಿಗೆ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
 
1.15 ನಿಮಿಷದ ವಿಡಿಯೋ ಕ್ಲಿಪ್‌ನಲ್ಲಿ  ಮಹಿಳೆಯೊಬ್ಬಳು ನಿರ್ಜನ ಪ್ರದೇಶದಿಂದ ಅವಸರದಲ್ಲಿ ಓಡಿ ಬರುತ್ತಿರುತ್ತಾಳೆ. ನಿಮ್ಮ ಮತ ನಿಮ್ಮ ಸುರಕ್ಷೆ ಎನ್ನು ಕ್ಯಾಪ್ಶನ್‌ನೊಂದಿಗೆ ವಿಡಿಯೋ ಅಂತ್ಯವಾಗುತ್ತದೆ.
 
ಏತನ್ಮಧ್ಯೆ, ಅಹಮದಾಬಾದ್‌ಲ್ಲಿರುವ ಸೈಬರ್ ಅಪರಾಧ ಸೆಲ್, ಸಾಮಾಜಿಕ ಮಾಧ್ಯಮದ ವೀಡಿಯೊ ವಿರುದ್ಧ ಶುಕ್ರವಾರ ಸಲ್ಲಿಸಿದ ದೂರಿನ ಬಗ್ಗೆ ತನಿಖೆ ನಡೆಸಿದೆ. ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಪ್ರಸಾರವಾದ ವಿಡಿಯೋ ಕ್ಲಿಪ್ ಮತದಾನಕ್ಕೆ ಒಳಪಟ್ಟ ಗುಜರಾತ್‌ನಲ್ಲಿ "ಮತಗಳನ್ನು ಧ್ರುವೀಕರಿಸಲು" ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡಲು ಉದ್ದೇಶಿಸಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ