ಗುಜರಾತ್ ಚುನಾವಣೆಗೆ ಬಿರುಸಿನ ಮತದಾನ ಆರಂಭ

ಶನಿವಾರ, 9 ಡಿಸೆಂಬರ್ 2017 (09:58 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್​ ನಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಬಿರುಸಿನ ಮತದಾನ ನಡೆಯುತ್ತಿರುವುದು ಕಂಡುಬಂದಿದೆ.
 
19 ಜಿಲ್ಲೆಗಳ 89 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು, 2.12  ಕೋಟಿ ಮತದಾರರು 977 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
 
ಕಚ್, ಜಾಮ್ ನಗರ್, ಸುರೇಂದ್ರನಗರ್, ರಾಜ್ ಕೋಟ್, ಪೋರ್  ಬಂದರ್, ಜುನಘಡ್, ಭಾವನಗರ, ಭರೂಚ್, ನರ್ಮದಾ, ಸೂರತ್ ಸೇರಿದಂತೆ ಒಟ್ಟು 19 ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.
 
24,689 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 2,12,31,652 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 1,11,05,933 ಪುರುಷ ಮತದಾರರಿದ್ದು, 1,01,25,472 ಮಹಿಳಾ  ಮತದಾರರಿದ್ದಾರೆ. ಇನ್ನು 247 ಮಂದಿ ತೃತೀಯ ಲಿಂಗಿಗಳು ಇದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ