ವಾಯುಸೇನೆಗೆ ಬಲ ತುಂಬಿದ ತೇಜಸ್

ಶುಕ್ರವಾರ, 1 ಜುಲೈ 2016 (13:06 IST)
ಸ್ವದೇಶಿ ನಿರ್ಮಿತ ಹಗುರ ಯುದ್ಧ ವಿಮಾನ ‘ತೇಜಸ್’ ಶುಕ್ರವಾರ ಅಧಿಕೃತವಾಗಿ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಯಿತು.

ಬೆಂಗಳೂರಿನ ಹೆಚ್​ಎಎಲ್ ವಾಯುನೆಲೆಯ ಅಧಿಕಾರಿಗಳು ಇಂದು ಮುಂಜಾನೆ ಪೂಜೆ ಸಲ್ಲಿಸಿದ ಬಳಿಕ ಎರಡು ಹಗುರವಿಮಾನಗಳನ್ನು ಸೇನೆಗೆ ಅಧಿಕೃತವಾಗಿ ಹಸ್ತಾಂತರಿಸಿದರು. ತೆಂಗಿನ ಕಾಯಿ ಒಡೆಯುವ ಮೂಲಕ ಧಾರ್ಮಿಕ ಆಚರಣೆಯನ್ನು ನೆರವೇರಿಸಲಾಯಿತು. ಸರ್ವಧರ್ಮ ಪ್ರಾರ್ಥನೆಯನ್ನು ಸಹ ಸಲ್ಲಿಸಲಾಯಿತು. 2017ರ ವೇಳೆಗೆ ಹೆಚ್ಎಎಲ್ ಮತ್ತೆ 6 ಎಲ್‌ಸಿಎಗಳನ್ನು ತಯಾರಿಸಿ ವಾಯುಸೇನೆಗೆ ಹಸ್ತಾಂತರಿಸಲಿದೆ. 
 
33 ವಷ೯ಗಳಲ್ಲಿ ಕಾರಣಾ೦ತರಗಳಿ೦ದ ಈ ಬಹುನಿರೀಕ್ಷಿತ ಯುದ್ಧವಿಮಾನದ ನಿಮಾ೯ಣ ವಿಳ೦ಬಗೊ೦ಡಿತ್ತು. ಇದೀಗ ಸೇನೆಯಲ್ಲಿ  ಬಳಕೆಯಲ್ಲಿರುವ ಮಿಗ್‍-25ರ ಬದಲಾಗಿ ತೇಜಸ್ ಸೇಪ೯ಡೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. 
 
ತೇಜಸ್ ಸೇರ್ಪಡೆ ಭಾರತೀಯ ಸೇನೆಯ ಬಲ ಹೆಚ್ಚಿಸಿದ್ದು ಪ್ರತಿ ಗಂಟೆಗೆ 13,00 ಕಿ.ಮೀ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯದ ವಿಮಾನಗಳದ್ದಾಗಿದೆ. ಮಿಸೈಲ್ ಸೇರಿದಂತೆ 500ಕೆಜಿ ಬಾಂಬ್ ಹೊತ್ತೊಯ್ಯಲಿದೆ. ಪಾಕಿಸ್ತಾನ ಚೀನಾ ಜತೆ ಸೇರಿ ಜಂಟಿಯಾಗಿ ತಯಾರಿಸಿರುವ ಜೆಎಫ್-17ಕ್ಕಿಂತ ಇದು ಅತ್ಯುನ್ನತ ಸಾಮರ್ಥ್ಯವನ್ನು ಹೊಂದಿದೆ.  
 
ಈ ಸ್ಥಳೀಯ ಫೈಟರ್ ಜೆಟ್, ಮುಂದಿನ ವರ್ಷ ಪೂರ್ಣ ಕಾರ್ಯಾಚರಣೆ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ