ಹಸುವಿನ ವಧೆ ಮತ್ತು ಗೋಮಾಂಸ ಸೇವನೆಯ ಮೇಲೆ ಉಲ್ಬಣಗೊಂಡ ಚರ್ಚೆಯ ಮಧ್ಯೆ, ವಿವಿಧ ಹಿಂದು ಸಂಘಟನೆ ಸಭೆಯಲ್ಲಿ ಪಾಲ್ಗೊಂಡ ಸಾಧ್ವಿ ಸರಸ್ವತಿ, ಗೋಮಾಂಸ ಸೇವನೆ ಪ್ರತಿಷ್ಠೆಯ ಸಂಕೇತ ಎಂದು ಪರಿಗಣಿಸುವವರನ್ನು ಗಲ್ಲಿಗೇರಿಸಬೇಕು ಎಂದು ಗುಡುಗಿದ್ದಾರೆ.
ನಿನ್ನೆ ಸಂಜೆ ಸಾಧ್ವಿ ಸರಸ್ವತಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವರ ಭಾಷಣವು ಕೋಮು ದ್ವೇಷವನ್ನು ಉಂಟುಮಾಡುವುದರಿಂದ ಗೋವಾದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದೆ.
ಗೋವಾದ ರಾಮನಾಥಿ ಗ್ರಾಮದಲ್ಲಿ ಹಿಂದೂ ಸಂಘಟನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಮಾಂಸವನ್ನು ತಿನ್ನುವವರನ್ನು ಸಾರ್ವಜನಿಕರ ಮುಂದೆ ಹಾಜರುಪಡಿಸಿ ಗಲ್ಲಿಗೇರಿಸಬೇಕು, ಅಂದಾಗ ಮಾತ್ರ ಜನರು ಗೋ ಮಾತೆಯನ್ನು ರಕ್ಷಿಸುವುದು ನಮ್ಮ ಕರ್ತವ್ಯವೆಂದು ಭಾವಿಸುವುದಾಗಿ ತಿಳಿಸಿದ್ದಾರೆ.