ಮತಯಂತ್ರ ತಿರುಚಲು ಬಿಜೆಪಿಯಿಂದ ಎಂಜಿನಿಯರ್‌ಗಳ ನೇಮಕ– ಹಾರ್ದಿಕ್ ಆರೋಪ
ಸೋಮವಾರ, 18 ಡಿಸೆಂಬರ್ 2017 (11:40 IST)
ಗುಜರಾತ್ ಚುನಾವಣೆಯಲ್ಲಿ ಮತಯಂತ್ರಗಳನ್ನು ತಿರುಚಲು ಬಿಜೆಪಿ ಪಕ್ಷ 140 ಎಂಜಿನಿಯರ್‌ಗಳನ್ನು ನೇಮಕ ಮಾಡಿದೆ ಎಂದು ಪಾಟಿದಾರ್ ಹೋರಾಟದ ಮುಖಂಡ ಹಾರ್ದಿಕ್ ಪಟೇಲ್ ಗಂಭೀರ ಆರೋಪ ಮಾಡಿದ್ದಾರೆ.
ಗುಜರಾತ್ ನಲ್ಲಿನ ಸುಮಾರು 5000 ಇವಿಎಂ ಮತಯಂತ್ರಗಳನ್ನು ಟ್ಯಾಂಪರ್ ಮಾಡಲು ಬಿಜೆಪಿಯ 140 ಎಂಜಿನಿಯರ್ ಗಳು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತು ಅಹಮದಾಬಾದ್ ಜಿಲ್ಲಾಧಿಕಾರಿ ಅವಂತಿಕಾ ಸಿಂಗ್ ಮಾತನಾಡಿದ್ದು, ಹಾರ್ದಿಕ್ ಪಟೇಲ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಆರೋಪ ಆಧಾರ ರಹಿತ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅನಿಸುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಬೇಕಿದ್ದರೂ ಅದು ಚುನಾವಣಾ ಆಯೋಗವೇ ನೀಡುತ್ತದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.