ಹಾರ್ದಿಕ್ ಪಟೇಲ್ ಮೇಲೆ ಮತ್ತೊಂದು ಸೆಕ್ಸ್ ಪ್ರಕರಣ ಸಂಕಟ

ಸೋಮವಾರ, 4 ಡಿಸೆಂಬರ್ 2017 (09:13 IST)
ಅಹಮ್ಮದಾಬಾದ್: ಇತ್ತೀಚೆಗಷ್ಟೇ ಗುಜರಾತ್ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ವಿರುದ್ಧ ಲೈಂಗಿಕ ಸಿಡಿ ಬಯಲಾಗಿತ್ತು. ಇದೀಗ ಮಹಿಳೆಯೊಬ್ಬರು ಹಾರ್ದಿಕ್ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು ಎಂದು ದೂರಿದ್ದಾರೆ.
 

ಈ ಸಂಬಂಧ ಮಹಿಳೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಮಹಿಳಾ ಆಯೋಗ ಹಾರ್ದಿಕ್ ವಿರುದ್ಧ ವಿಚಾರಣೆ ನಡೆಸಲಿದೆ. ಈ ಸಂದರ್ಭ ಮಹಿಳಾ ಆಯೋಗದ ಅಧ್ಯಕ್ಷ ರೇಖಾ ಶರ್ಮಾ ಸೂರತ್ ಗೆ ಭೇಟಿ ನೀಡಲಿದ್ದಾರೆ.

ಆದರೆ ಇದೆಲ್ಲಾ ಬಿಜೆಪಿ ನನ್ನ ಹೆಸರು ಕೆಡಿಸಲು ಮಾಡುತ್ತಿರುವ ತಂತ್ರ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ನಾನು ಅಮಾಯಕ ಎಂದು ಸಾಬೀತುಪಡಿಸಿ ತೋರಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ