ಉತ್ತರಾಖಂಡ್ ರಾಜ್ಯದೊಳಗೆ ನುಸುಳುತ್ತಿರುವ ಚೀನಾ ಸೈನಿಕರು: ಸಿಎಂ ರಾವತ್

ಬುಧವಾರ, 27 ಜುಲೈ 2016 (17:45 IST)
ಅರುಣಾಚಲ ಪ್ರದೇಶದ ಗಡಿಯೊಳಗಿರುವ ಚಮೋಲಿ ಜಿಲ್ಲೆಯಲ್ಲಿ ಚೀನಾದ ಸೇನಾಪಡೆಗಳು ನುಸುಳುವಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಉತ್ತರಾಖಂಡ್‌ನ ಮುಖ್ಯಮಂತ್ರಿ ಹರೀಶ್ ರಾವತ್ ಆತಂಕ ವ್ಯಕ್ತಪಡಿಸಿದ್ದಾರೆ.
 
ಚೀನಾದ ಸೇನಾಪಡೆಗಳ ನಿರಂತರ ನುಸುಳುವಿಕೆ ಕಳವಳಕ್ಕೆ ಕಾರಣವಾಗಿದೆ. ನಮ್ಮ ಗಡಿಗಳು ಶಾಂತಿಯುತವಾಗಿರಬೇಕು. ಹೆಚ್ಚಿನ ಸೇನಾಪಡೆಗಳನ್ನು ಗಡಿಯಲ್ಲಿ ನಿಯೋಜಿಸಬೇಕು. ಕೇಂದ್ರ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
 
ಭಾರತ ದೇಶದ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನಾಪಡೆಗಳು ಒಳನುಸುಳಲು ನಿರಂತರವಾಗಿ ಪ್ರಯತ್ನಿಸುತ್ತಿವೆ ಎಂದು ಜುಲೈ 19 ರಂದು ರಾಜ್ಯ ಸರಕಾರಕ್ಕೆ ಕೇಂದ್ರಕ್ಕೆ ವರದಿಯನ್ನು ಸಲ್ಲಿಸಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವರಾದ ಕಿರೆನ್ ರಿಜಿಜು ಮಾತನಾಡಿ, ಚೀನಾದ ಸೇನಾಪಡೆಗಳ ಒಳನುಸುಳುವಿಕೆ ಬಗ್ಗೆ ವರದಿಯನ್ನು ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ. ಉತ್ತರಾಖಂಡ ರಾಜ್ಯ ಚೀನಾದೊಂದಿಗೆ 350 ಕಿ.ಮೀ ಗಡಿಯನ್ನು ಹೊಂದಿದೆ. 
 
ಅರುಣಾಚಲ ಪ್ರದೇಶದ ಕಮೆಂಗ್ ಜಿಲ್ಲೆಯಲ್ಲಿ ಚೀನಾದ 250 ಸೈನಿಕರು ಜೂನ್ ತಿಂಗಳಲ್ಲಿ ನಗರದೊಳಗೆ ನುಸುಳಿ ಕೋಲಾಹಲ ಸೃಷ್ಟಿಸಿದ್ದರು.
 
ಎನ್‌ಎಸ್‌ಜಿ ಗುಂಪಿಗೆ ಭಾರತ ಸೇರ್ಪಡೆಯಾಗುವುದನ್ನು ತಡೆಯಲು ಚೀನಾ ಅಡ್ಡಿಯಾಗಿದ್ದಲ್ಲದೇ ಭಾರತದ ವಿರುದ್ಧ ಕಠಿಣ ನಿಲುವು ತೆಗೆದುಕೊಂಡು ದೇಶದೊಳಗೆ ತನ್ನ ಸೈನಿಕರನ್ನು ಒಳನುಸುಳಲು ಪ್ರೇರೇಪಿಸಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ