ಗೋವಧೆ, ಕಳ್ಳಸಾಗಣೆಯ ಹಣ ಭಯೋತ್ಪಾದನೆ ಹರಡಲು ಬಳಕೆ: ಸ್ಫೋಟಕ ಮಾಹಿತಿ ಬಹಿರಂಗ

ಬುಧವಾರ, 31 ಆಗಸ್ಟ್ 2016 (18:18 IST)
ಗೋವಧೆ ಮತ್ತು  ಗೋ ಕಳ್ಳಸಾಗಾಣಿಕೆಯಿಂದ ಗಳಿಸಿದ ಹಣವನ್ನು  ದೇಶಾದ್ಯಂತ ಭಯೋತ್ಪಾದನೆ ಹರಡಲು ಬಳಸಲಾಗುತ್ತಿದೆ ಎಂಬ ಸ್ಫೋಟಕ ಮಾಹಿತಿಯನ್ನು ಹರ್ಯಾಣ ಐಪಿಎಸ್ ಅಧಿಕಾರಿಣಿ ಭಾರತಿ ಅರೋರಾ ಬಿಚ್ಚಿಟ್ಟಿದ್ದಾರೆ.

ಅರೋರಾ ಅವರನ್ನು ಇತ್ತೀಚೆಗೆ ಮನೋಹರ್ ಲಾಲ್ ಖಟ್ಟರ್ ಸರ್ಕಾರ ನೇಮಕ ಮಾಡಿದ, ರಾಜ್ಯದಲ್ಲಿ  ಗೋವಧೆ ಮತ್ತು ಗೋಸಾಗಣೆ ತಪಾಸಣೆ ಪೊಲೀಸ್ ತಂಡಗಳಿಗೆ ಉಸ್ತುವಾರಿ ವಹಿಸುವಂತೆ ತಿಳಿಸಲಾಗಿತ್ತು. 
 
ಗೋ ಕಳ್ಳಸಾಗಣೆ ಮತ್ತು ವಧೆ ಸಂಘಟಿತ ಅಪರಾಧವಾಗಿದ್ದು, ಈ ವ್ಯವಹಾರಗಳಿಂದ ಗಳಿಸುವ ಹಣವನ್ನು ಭಾರತದಲ್ಲಿ ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳ ಉತ್ತೇಜನಕ್ಕೆ ಬಳಸಲಾಗುತ್ತಿದೆ ಎಂದು ಅರೋರಾ ಬಹಿರಂಗ ಮಾಡಿದರು. ಹಸುಗಳನ್ನು ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ಹೇಳಿದರು. ಹರ್ಯಾಣದಲ್ಲಿ ಗೋವಧೆಯು 3 ರಿಂದ 10 ವರ್ಷಗಳ ಕಠಿಣ ಶಿಕ್ಷೆಯನ್ನು ಆಹ್ವಾನಿಸುತ್ತದೆ. 

ವೆಬ್ದುನಿಯಾವನ್ನು ಓದಿ