ಕೈ ನಾಯಕರಿಗೆ ಹೈಕಮಾಂಡ್ ಬಿಗ್ ಟಾಸ್ಕ್

ಗುರುವಾರ, 3 ಆಗಸ್ಟ್ 2023 (08:23 IST)
ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ 25 ಸ್ಥಾನಗಳನ್ನು ಗೆಲ್ಲುವ ದೊಡ್ಡ ಗುರಿಯೊಂದಿಗೆ ಹೈಕಮಾಂಡ್ ರಣತಂತ್ರ ರೂಪಿಸತೊಡಗಿದೆ.
 
ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಹೈಕಮಾಂಡ್ ನಾಯಕರು ಸಭೆ ಮೇಲೆ ಸಭೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ 50ಕ್ಕೂ ಹೆಚ್ಚು ನಾಯಕರು ಪಾಲ್ಗೊಂಡಿದ್ರು. ಜನ ನಮ್ಮ ಪರವಾಗಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ಉತ್ತಮವಾಗಿದೆ. ಈಗ ಚುನಾವಣೆ ನಡೆದರೂ 15-20 ಸೀಟ್ ಸಿಗುತ್ತೆ. ಆದರೆ ಕರ್ನಾಟಕದಲ್ಲಿ ಕನಿಷ್ಠ 25 ಸ್ಥಾನ ಗೆಲ್ಲಲೇಬೇಕು. 25 ಸ್ಥಾನ ಗೆಲ್ಲಿಸುವ ಹೊಣೆ ಸಚಿವರು, ಶಾಸಕರದ್ದಾಗಿದೆ. ಇದಕ್ಕಾಗಿ 5 ಗ್ಯಾರಂಟಿಗಳ ಅನುಷ್ಠಾನ ವ್ಯವಸ್ಥಿತವಾಗಿ ಆಗಬೇಕು. ಅನುಷ್ಠಾನದ ಬಳಿಕ ಫಲಾನುಭವಿಗಳ ಸಭೆ, ಸಮಾರಂಭ ಮಾಡಬೇಕು. ಬಿಜೆಪಿಗರು ಹಿಂದು, ಮುಸ್ಲಿಂ ಎಂಬ ತಂತ್ರವನ್ನ ಮಾಡಬಹುದು. ಇದಕ್ಕೆ ಪ್ರತಿಯಾಗಿ ನಾವು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ