ಪಂಜಾಬ್ : ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಸರ್ಕಾರ ಭ್ರಷ್ಟಾಚಾರ ನಿರ್ಮೂಲನೆ ಮಾಡಿದೆ.
ಇದೀಗ ಅವರ ಪ್ರತಿರೂಪ ಭಗವಂತ್ ಮಾನ್ ಮತ್ತು ಅವರ ಮಂತ್ರಿಗಳು ಪಂಜಾಬ್ನಲ್ಲಿ ಪ್ರಾಮಾಣಿಕವಾಗಿ ಸರ್ಕಾರವನ್ನು ನಡೆಸಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರು ಮಾರ್ಚ್ 23ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ಸಿಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ `ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಯಾರಾದರೂ ಲಂಚ ಕೇಳಿದರೇ ಅವರ ಆಡಿಯೋ, ವಿಡಿಯೋವನ್ನು ಈ ಸಂಖ್ಯೆಗೆ ಕಳುಹಿಸಿ ಎಂದು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
ಭಗವಂತ್ ಮಾನ್ ಅವರ ಈ ನಿರ್ಧಾರವನ್ನು ಕೇಜ್ರಿವಾಲ್ ಅವರು ಸ್ವಾಗತಿಸಿದ್ದು, ಮುಂದೆ ಯಾರಾದರೂ ನಿಮ್ಮನ್ನು ಲಂಚ ಕೇಳಿದರೆ, ನಿಮ್ಮ ಫೋನ್ ತೆಗೆದುಕೊಂಡು ರೆಕಾರ್ಡ್ ಮಾಡಿ ಅದನ್ನು ಭಗವಂತ್ ಮಾನ್ ಅವರ ನಂಬರ್ಗೆ ಕಳುಹಿಸಿ.
ಇದು ಭಗವಂತ್ ಮಾನ್ ಅವರ ವೈಯಕ್ತಿಕ ನಂಬರ್ ಆಗಿದ್ದು, ಲಂಚ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.