ನೋಟು ನಿಷೇಧದ ಬಳಿಕ ಪ್ರಧಾನಿ ಮೋದಿ ಕಾಳಧನಿಕರ ವಿರುದ್ಧ ಬಹಿರಂಗ ಹೋರಾಟವನ್ನು ಘೋಷಿಸಿದ್ದಾರೆ. ಪ್ರತಿದಿನ ಆದಾಯ ತೆರಿಗೆ ಇಲಾಖೆ, ಇಡಿ ಮತ್ತು ಸಿಬಿಐ ಅಧಿಕಾರಿಗಳು ಕಪ್ಪುಕುಳಗಳ ನಿವಾಸದ ಮೇಲೆ ದಾಳಿ ಮಾಡಿ ಮೂಟೆಗಟ್ಟಲೆ ಹಣವನ್ನು ವಶಪಡಿಸಿಕೊಳ್ಳುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇದೆ. ಈ ಕಪ್ಪುಕುಳಗಳ ಬಗ್ಗೆ ಅವರಿಗೆ ಮಾಹಿತಿ ಎಲ್ಲಿಂದ ಸಿಗುತ್ತದೆ ? ಕಪ್ಪುಹಣದ ವಿರುದ್ಧದ ಹೋರಾಟವನ್ನು ಪ್ರಧಾನಿ ಮೋದಿ ಹೇಗೆ ನಿರ್ವಹಿಸುತ್ತಿದ್ದಾರೆ ಎಂಬ ಕುತೂಹಲ ನಿಮಗಿರಲಿಕ್ಕೆ ಸಾಕು.
ಕಪ್ಪುಹಣ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ವಿಶೇಷ ತಂಡವನ್ನು ರಚಿಸಿದ್ದಾರೆ. ಈ ತಂಡದಲ್ಲಿ ನಿರ್ದೇಶಕರ ಮಟ್ಟದ ಅಧಿಕಾರಿಗಳಿದ್ದು ಅವರು ಪ್ರಧಾನಿ ಕಾರ್ಯಾಲಯದ ದೂರವಾಣಿ ಕರೆ ಮತ್ತು ಇ-ಮೇಲ್‌ಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ. ಈ ಕರೆ- ಇ-ಮೇಲ್‌ಗಳನ್ನು ಪರಿಶೀಲಿಸುವ ತಂಡ ಬಳಿಕ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತದೆ.